ಸುಕ್ಮಾ(ಛತ್ತೀಸ್ ಗಢ): ಬುರ್ಕಪಾಲ್ ದಾಳಿಗೆ ಸಂಬಂಧಪಟ್ಟಂತೆ ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯ ಚಿಂತಲ್ ನಾರ್ ಪ್ರದೇಶದ ಚಿಂತಾಗುಫಾದಲ್ಲಿ ಇಂದು ಭದ್ರತಾ ಪಡೆ ಸಿಬ್ಬಂದಿ 9 ಮಂದಿಯನ್ನು ಬಂಧಿಸಿದ್ದಾರೆ.
ಕುಕನರ್ ಪ್ರದೇಶದಿಂದ ಮತ್ತೆ 10 ಮಾವೋವಾದಿಗಳನ್ನು ಬಂಧಿಸಲಾಗಿದೆ ಎಂದು ಸುಕ್ಮಾ ಸೂರರಿಂಟೆಂಡೆಂಟ್ ಆಫ್ ಪೊಲೀಸ್ ಅಭಿಶೇಕ್ ಮೀನಾ ತಿಳಿಸಿದ್ದಾರೆ.
ಬುರ್ಕಪಾಲ್ ನ ಸುಕ್ಮಾ ಪ್ರದೇಶದಿಂದ ಮತ್ತೊಬ್ಬ ಮಾವೋವಾದಿಯ ಶರೀರವನ್ನು ಕಳೆದ ಏಪ್ರಿಲ್ 28ರಂದು ಪೊಲೀಸರು ಮರಳಿ ಪಡೆದಿದ್ದರು.
ಕಳೆದ ಸೋಮವಾರ ಸುಕ್ಮಾದಲ್ಲಿ ಕೇಂದ್ರ ಮೀಸಲು ಪಡೆಯ ಪೊಲೀಸರು ಮತ್ತು ಮಾವೋವಾದಿಗಳ ಮಧ್ಯೆ ನಡೆದ ಎನ್ ಕೌಂಟರ್ ನಲ್ಲಿ 25 ಪೊಲೀಸ್ ಸಿಬ್ಬಂದಿ ಹತರಾಗಿದ್ದರು.