ಉಗ್ರಗಾಮಿಗಳ ದಾಳಿ ಹಿನ್ನಲೆ: ದಕ್ಷಿಣ ಕಾಶ್ಮೀರದ 40 ಬ್ಯಾಂಕ್ ಶಾಖೆಗಳಲ್ಲಿ ನಗದು ವಹಿವಾಟು ಸ್ಥಗಿತ

ದಕ್ಷಿಣ ಕಾಶ್ಮೀರದಲ್ಲಿ ಉಗ್ರಗಾಮಿಗಳು ಬ್ಯಾಂಕುಗಳನ್ನು ಗುರಿಯಾಗಿಟ್ಟುಕೊಂಡು ದಾಳಿ...
ಉಗ್ರಗಾಮಿಗಳು ದಾಳಿ ನಡೆಸಿದ ಬ್ಯಾಂಕುಗಳ ಸಮೀಪ ಭದ್ರತಾ ಸಿಬ್ಬಂದಿ ಮತ್ತು ಗಸ್ತು ವಾಹನ
ಉಗ್ರಗಾಮಿಗಳು ದಾಳಿ ನಡೆಸಿದ ಬ್ಯಾಂಕುಗಳ ಸಮೀಪ ಭದ್ರತಾ ಸಿಬ್ಬಂದಿ ಮತ್ತು ಗಸ್ತು ವಾಹನ
ನವದೆಹಲಿ:  ದಕ್ಷಿಣ ಕಾಶ್ಮೀರದಲ್ಲಿ ಉಗ್ರಗಾಮಿಗಳು ಬ್ಯಾಂಕುಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕಾಶ್ಮೀರದ ಪುಲ್ವಾಮಾ ಮತ್ತು ಶೊಪಿಯಾನ್ ಜಿಲ್ಲೆಗಳ ಸೂಕ್ಷ್ಮ ಪ್ರದೇಶಗಳಲ್ಲಿರುವ ಸುಮಾರು 40 ಬ್ಯಾಂಕ್ ಶಾಖೆಗಳಲ್ಲಿ ನಗದು ವಹಿವಾಟುಗಳನ್ನು ಸ್ಥಗಿತಗೊಳಿಸಲಾಗಿದೆ.
ಭದ್ರತಾ ಸಂಸ್ಥೆಗಳು ಹೊರಡಿಸಿರುವ ಸಲಹೆಗಳ ಆಧಾರದ ಮೇಲೆ ಎರಡೂ ಜಿಲ್ಲೆಗಳ ಬ್ಯಾಂಕುಗಳಿರುವ ಸುತ್ತಮುತ್ತ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯ ಮುಂದಿನ ದಿನಗಳಲ್ಲಿ ಇಂತಹ ಇನ್ನೂ ಅನೇಕ ದಾಳಿಗಳು ನಡೆಯುವ ಸಾಧ್ಯತೆಯಿದೆ.
ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್, ಎಲ್ಲಕ್ವೈ ದೆಹಟಿ ಬ್ಯಾಂಕುಗಳನ್ನು ಇತ್ತೀಚೆಗೆ ಉಗ್ರಗಾಮಿಗಳು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದ್ದು ಇಲ್ಲಿ ನಗದು ವಹಿವಾಟು ಸ್ಥಗಿತಗೊಳಿಸಲಾಗಿದೆ. ಜಮ್ಮು-ಕಾಶ್ಮೀರ ಬ್ಯಾಂಕಿನ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಉಳಿದೆಲ್ಲಾ ಬ್ಯಾಂಕಿಂಗ್ ಸೇವೆಗಳು ಈ ಪ್ರದೇಶಗಳಲ್ಲಿ ಮುಂದುವರಿಯಲಿದೆ.
ಈ ಪ್ರದೇಶದ ಸುತ್ತಮುತ್ತಲಿನ ಜನರು ನಿಗದಿಪಡಿಸಿದ ಬ್ಯಾಂಕ್ ಶಾಖೆಗಳಲ್ಲಿಯೇ ನಗದು ವಹಿವಾಟು ನಡೆಸಬಹುದಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com