ವಿದೇಶಿ ದೇಣಿಗೆ ವಿವರ ನೀಡಿ: ಆಪ್ ಗೆ ಗೃಹ ಸಚಿವಾಲಯದ ಪ್ರಶ್ನೆ!

ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆಯನ್ನು ಉಲ್ಲಂಘಿಸಿದ ಶಂಕೆ ಮೇರೆಗೆ ವಿದೇಶಿ ದೇಣಿಗೆ ವಿವರ ನೀಡುವಂತೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಆಮ್ ಆದ್ಮಿ ಪಕ್ಷಕ್ಕೆ ಸೂಚಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆಯನ್ನು ಉಲ್ಲಂಘಿಸಿದ ಶಂಕೆ ಮೇರೆಗೆ ವಿದೇಶಿ ದೇಣಿಗೆ ವಿವರ ನೀಡುವಂತೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಆಮ್ ಆದ್ಮಿ ಪಕ್ಷಕ್ಕೆ ಸೂಚಿಸಿದೆ.

ಇದೊಂದು ಸಾಮಾನ್ಯ ತನಿಖೆಯಾಗಿದ್ದು, ಆಮ್ ಆದ್ಮಿ ಪಕ್ಷದ ರೀತಿಯಂತೆಯೇ ಇತರೆ ಪಕ್ಷಗಳಿಗೂ ಇದೇ ರೀತಿ ಸೂಚನೆ ನೀಡಿಲಾಗಿದೆ. ಇದೊಂದು ಸಾಮಾನ್ಯ ತನಿಖೆಯಷ್ಟೇ. ಪಕ್ಷಗಳಿಗೆ ವಿದೇಶಿ ದೇಣಿಗೆ ವಿವರ ನೀಡುವಂತೆ  ಕೇಳಿಲಾಗಿದೆ ಎಂದು ಎಂಹೆಚ್ ಎ ತಿಳಿಸಿದೆ. ಅಂತೆಯೇ ಈ ಬಗ್ಗೆ ಯಾವುದೇ ನೋಟಿಸ್ ನೀಡಿಲ್ಲ. ಆದರೆ ಆಮ್ ಆದ್ಮಿ ಪಕ್ಷದಿಂದ ಪ್ರತಿಕ್ರಿಯೆ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.

ದ್ವೇಷದ ರಾಜಕಾರಣ ಎಂದು ಟೀಕಿಸಿದ ಅರವಿಂದ್ ಕೇಜ್ರಿವಾಲ್
ಇದೇ ವೇಳೆ ಕೇಂದ್ರ ಸರ್ಕಾರದ ನಡೆಯನ್ನು ಟೀಕಿಸಿರುವ ಅರವಿಂದ್ ಕೇಜ್ರಿವಾಲ್ ಅವರು, ಇದು ಕೇಂದ್ರ ಸರ್ಕಾರದ ದ್ವೇಷದ ರಾಜಕಾರಣ ಎಂದು ಬಿಂಬಿಸಿದ್ದಾರೆ. ಕೇಂದ್ರದ ಎನ್ ಡಿಎ ಸರ್ಕಾರ ಸರ್ಕಾರಿ ಸಂಸ್ಥೆಗಳನ್ನು ತನ್ನ  ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದು, ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com