ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಪ್ರಧಾನಿ ಮೋದಿ ಏಕೈಕ ಆಶಾಕಿರಣ: ಮೆಹಬೂಬಾ ಮುಫ್ತಿ

70 ವರ್ಷದಿಂದ ಇರುವ ಕಾಶ್ಮರೀ ಸಮಸ್ಯೆ ಬಗೆಹರಿಯಲು ಪ್ರಧಾನಮಂತ್ರಿ ನರೇಂದ್ರ ಮೋದಿಯೊಬ್ಬರಿಂದ ಮಾತ್ರ ಸಾಧ್ಯವಿದ್ದು, ಅವರೇ ಏಕೈಕ ಆಶಾಕಿರಣ ಎಂದು...
ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ
ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ
ಜಮ್ಮು: 70 ವರ್ಷದಿಂದ ಇರುವ ಕಾಶ್ಮರೀ ಸಮಸ್ಯೆ ಬಗೆಹರಿಯಲು ಪ್ರಧಾನಮಂತ್ರಿ ನರೇಂದ್ರ ಮೋದಿಯೊಬ್ಬರಿಂದ ಮಾತ್ರ ಸಾಧ್ಯವಿದ್ದು, ಅವರೇ ಏಕೈಕ ಆಶಾಕಿರಣ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಶನಿವಾರ ಹೇಳಿದ್ದಾರೆ. 
ಬಹು ನೀರೀಕ್ಷಿತ ಜಮ್ಮುವಿನ ಸೇತುವೆ ನಿರ್ಮಾಣ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿರುವ ಅವರು, ಜಮ್ಮು ಮತ್ತು ಕಾಶ್ಮೀರ ಸಮಸ್ಯೆ ಬಗೆಹರಿಸುತ್ತಾರೆಂದರೆ ಅದು ಕೇವಲ ಪ್ರಧಾನಿ ಮೋದಿಯವರಿಂದ ಮಾತ್ರ ಸಾಧ್ಯ. ಅವರು ಯಾವುದೇ ನಿರ್ಧಾರ ಕೈಗೊಂಡರೂ ದೇಶ ಅವರಿಗೆ ಬೆಂಬಲ ನೀಡುತ್ತದೆ ಎಂದು ಹೇಳಿದ್ದಾರೆ. 
ಈ ಹಿಂದಿದ್ದ ಪ್ರಧಾನಮಂತ್ರಿಗಳೂ ಕೂಟ ಪಾಕಿಸ್ತಾನಕ್ಕೆ ಭೇಟಿ ನೀಡಬೇಕೆಂದು ಬಯಸಿದ್ದರು. ಆದರೆ, ಅವರಿಗೆ ಸಾಧ್ಯವಾಗಲಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲಾಹೋರ್ ಗೆ ಭೇಟಿ ನೀಡುವ ಮೂಲಕ ತಮ್ಮ ಶಕ್ತಿ ಏನೆಂಬುದನ್ನು ಸಾಬೀತು ಪಡಿಸಿದ್ದರು. ಇದು ಅವರಲ್ಲಿರುವ ನೈತಿಕತೆಗೆ ಉದಾಹರಣೆಯಾಗಿದೆ ಎಂದು ತಿಳಿಸಿದ್ದಾರೆ, 
ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರೂ ಕೂಡ ಕಾಶ್ಮೀರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದರು. ಆದರೆ, ಇತರೆ ಸರ್ಕಾರಗಳು ಇದಕ್ಕೆ ಸರಿಯಾದ ಸಾಥ್ ನೀಡಿರಲಿಲ್ಲ. ವಾಜಪೇಯಿಯವರು ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧವನ್ನು ಉತ್ತಮವಾಗುವಂತೆ ಮಾಡಿದ್ದರು. ಆದರೆ, ಈ ಹಿಂದಿದ್ದ ಸರ್ಕಾರ ಮತ್ತೆ ಶಾಂತಿ ಪರಿಸ್ಥಿತಿ ನಾಶಗೊಳ್ಳುವಂತೆ ಮಾಡಿತ್ತು. 2008ರ ಬಳಿಕ ಮೊದಲ ಬಾರಿಗೆ ಕಾಶ್ಮೀರ ಸಮಸ್ಯೆ ಬಗೆಹರಿಸುವ ವಿಶ್ವಾಸ ಜನರಲ್ಲಿ ಮೂಡತೊಡಗಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com