ಜಾರ್ಖಂಡ್: ಶಾಲೆಗೆ ಒಂದು ದಿನದ ಪ್ರಾಂಶುಪಾಲೆಯಾದ 14 ವರ್ಷದ ಬಾಲಕಿ!

ಜಾರ್ಖಂಡ್ ಡುರುಕು ಗ್ರಾಮದಲ್ಲಿರುವ ಈಸ್ಟ್ ಸಿಂಗ್ ಬುಮ್ ಶಾಲೆಯ ಆದಿವಾಸಿ ಜನಾಂಗದ 14 ವರ್ಷದ ಬಾಲಕಿ ಒಂದು ದಿನದ ಮಟ್ಟಿಗೆ ಶಾಲೆಯ ಪ್ರಾಂಶುಪಾಲೆ ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಜೆಮ್ ಶೆಡ್ ಪುರ: ಜಾರ್ಖಂಡ್ ಡುರುಕು ಗ್ರಾಮದಲ್ಲಿರುವ ಈಸ್ಟ್ ಸಿಂಗ್ ಬುಮ್ ಶಾಲೆಯ ಆದಿವಾಸಿ ಜನಾಂಗದ 14 ವರ್ಷದ ಬಾಲಕಿ ಒಂದು ದಿನದ ಮಟ್ಟಿಗೆ ಶಾಲೆಯ ಪ್ರಾಂಶುಪಾಲೆ ಆಗೆ ಕೆಲಸ ನಿರ್ವಹಿಸಿದ್ದಾಳೆ.
10ನೆ ತರಗತಿ ವಿದ್ಯಾರ್ಥಿನಿಯಾಗಿರುವ ಪ್ರಿಯಾಂಕ ಮುರ್ಮು ಒಂದು ದಿನಕ್ಕೆ ಪ್ರಾಂಶುಪಾಲೆಯಾಗಿದ್ದಾಳೆ, ತನ್ನ ಶೈಕ್ಷಣಿಕ ವಿದ್ಯಾಭ್ಯಾಸ ಮುಗಿಸಿ ನೈಜ ಜೀವನದಲ್ಲೂ ಶಾಲೆಯ ಪ್ರಾಂಶುಪಾಲೆಯಾಗಿ ಕೆಲಸ ಮಾಡುವುದಾಗಿ ಆಕೆ ವಿಶ್ವಾಸ ವ್ಯಕ್ತ ಪಡಿಸಿದ್ದಾಳೆ.
ಶಾಲೆಯ ಪ್ರಾಂಶುಪಾಲ ಸುನಿಲ್ ಯಾದವ್ ಮತ್ತು ಗ್ರಾಮದ ಮುಖ್ಯಸ್ಥರ ಜೊತೆ ಶಾಲೆಯ ಪ್ರಾಂಶುಪಾಲರ ಛೇಂಬರ್ ಆಗಮಿಸಿದ ಪ್ರಿಯಾಂಕ ಶಾಲೆಯ ಬೆಳಗ್ಗಿನ ಪ್ರಾರ್ಥನೆಗೆ ಹಾಜರಾಗಿದ್ದರು.
ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ಅನುಷ್ಠಾನದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಪಾತ್ರ ಅತಿ ಮುಖ್ಯವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ರಘುಬರ್ ದಾಸ್ ಸಮಾಜದಲ್ಲಿ ಸುಧಾರಣೆ ತರಲು ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ವಿವರಿಸಿದ್ದಾಳೆ.
ಎಲ್ಲಾ ತರಗತಿಗಳಿಗೂ ಭೇಟಿ ನೀಡಿದ ಪ್ರಿಯಾಂಕ ಮಧ್ಯಾಹ್ನದ ಬಿಸಿಯೂಟ ಸಿದ್ಧತೆ ಪರಿಶೀಲಿಸಿ, ಅದರ ರುಚಿ ನೋಡಿ ನಂತರ ವಿದ್ಯಾರ್ಥಿಗಳಿಗೆ ಬಡಿಸಲಾಯಿತು.
ಜಿಲ್ಲಾಧಿಕಾರಿ ಸಂಜಯ್ ಕುಮಾರ್ ಪಾಂಡೆ ಪ್ರಿಯಾಂಕ ಗೆ ಒಂದು ದಿನದ ಮಟ್ಟಿಗೆ ಪ್ರಾಂಶುಪಾಲೆ ಆಗುವ ಅವಕಾಶ ನೀಡಿದರು.
ಈ ನಿರ್ಧಾರದಿಂದ ಆದಿವಾಸಿ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿ ಹಾಗೂ ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಆರೋಗ್ಯಕರ ಸಂಬಂಧ ಬೆಳೆಸಲು ಈ ನಿರ್ಧಾರ ಕೈಗೊಳ್ಳಲಾಯಿತು ಎಂಜು ಜಿಲ್ಲಾಧಿಕಾರಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com