ಲಂಕಾ ತಮಿಳರೊಂದಿಗೆ ಬಾಂಧವ್ಯ ಬೆಸೆಯಲು 'ಚಾಯ್' ಬಳಸಿದ ಪ್ರಧಾನಿ ಮೋದಿ!

ಶ್ರೀಲಂಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಲಂಕಾದಲ್ಲಿರುವ ತಮಿಳುನಾಡು ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಲಂಕಾ ತಮಿಳರೊಂದಿಗೆ ಬಾಂಧವ್ಯ ಬೆಸೆಯಲು ಚಾಯ್ ಬಳಸಿದ್ದಾರೆ.
ನರೇಂದ್ರ ಮೋದಿ
ನರೇಂದ್ರ ಮೋದಿ
ನವದೆಹಲಿ: ಶ್ರೀಲಂಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಲಂಕಾದಲ್ಲಿರುವ ತಮಿಳುನಾಡು ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಲಂಕಾ ತಮಿಳರೊಂದಿಗೆ ಬಾಂಧವ್ಯ ಬೆಸೆಯಲು ಚಾಯ್ ಬಳಸಿದ್ದಾರೆ. 
ಹೌದು ತಮಿಳು ಸಮುದಾಯವನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಹಾಗೂ ಲಂಕಾ ತಮಿಳರ ನಡುವೆ ಇರುವ ಚಾಯ್ ಸಾಮ್ಯತೆಯನ್ನು ಬಳಸಿದ್ದು, "ನೀವು ಹಾಗೂ ನಾನು ಒಂದು ಚಾಯ್ ಸಾಮ್ಯತೆಯನ್ನು ಹೊಂದಿದ್ದೇವೆ. ಚಾಯ್ ನೊಂದಿಗೆ ನಾವಿಬ್ಬರೂ ವಿಶೇಷವಾದ ಸಂಬಂಧವನ್ನು ಹೊಂದಿದ್ದೇವೆ. "2014 ರ ಲೋಕಸಭಾ ಚುನಾವಣೆ ವೇಳೆ ಹಮ್ಮಿಕೊಳ್ಳಲಾಗಿದ್ದ ಚಾಯ್ ಪೇ ಚರ್ಚಾ" ಕಾರ್ಯಕ್ರಮವನ್ನು ನೆನಪಿಸಿಕೊಂಡಿದ್ದು, ಚಾಯ್ ಪೇ ಚರ್ಚಾ ಕೇವಲ ಸ್ಲೋಗನ್ ಅಲ್ಲ, ಅದು ಆಳವಾದ ಗೌರವದ ಪ್ರತೀಕ ಎಂದು ಹೇಳಿದ್ದಾರೆ. 
ಶ್ರೀಲಂಕಾದಲ್ಲಿ ಬೆಳೆಯುವ ಸಿಲೋನ್ ಟೀ (ಚಾಯ್) ಬಗ್ಗೆ ವಿಶ್ವದ ಜನತೆಗೆ ಪರಿಚಿತ ಚಾಯ್ ಬ್ರಾಂಡ್ ಆಗಿದೆ. ಟೀ ರಫ್ತಿನಲ್ಲಿ ಶ್ರೀಲಂಕಾ 3ನೇ ಸ್ಥಾನದಲ್ಲಿದ್ದರೆ ಅದು ನಿಮ್ಮ ಕಠಿಣ ಪರಿಶ್ರಮದಿಂದ ಎಂದು ಮೋದಿ ಲಂಕಾದ ತಮಿಳರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ತಮಿಳು ಐಕಾನ್ ಗಳಾದ ಎಂಜಿಆರ್ ಹಾಗೂ ಮುತ್ತಯ್ಯ ಮುರಳೀಧರನ್ ಅವರ ಬಗ್ಗೆಯೂ ಮಾತನಾಡಿರುವ ಮೋದಿ, ಶ್ರೀಲಂಕಾದಲ್ಲಿ ಹುಟ್ಟಿದ್ದ ಎಂಜಿಆರ್ ತಮಿಳುನಾಡಿನೊಂದಿಗೆ ಜೀವನ ಪರ್ಯಂತ ಬಾಂಧವ್ಯ ಹೊಂದಿದ್ದರು. ಅಂತೆಯೇ ನೀವು ಮುತ್ತಯ್ಯ ಮುರಳೀಧರನ್ ಎಂಬ ಜಗದ್ವಿಖ್ಯಾತ ಸ್ಪಿನ್ನರ್ ನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಿದ್ದೀರ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com