ನನ್ನ ಪುತ್ರ ಬಿಜೆಪಿಗಲ್ಲ, ಸತ್ಯಕ್ಕೆ ಏಜೆಂಟ್ ಆಗಿದ್ದಾನೆ: ಕಪಿಲ್ ಮಿಶ್ರಾ ತಾಯಿ

ನನ್ನ ಮಗನ ಮೇಲೆ ನನಗೆ ಹೆಮ್ಮೆಯಿದೆ. ನನ್ನ ಪುತ್ರ ಸತ್ಯಕ್ಕೆ ಏಜೆಂಟ್ ಆಗಿದ್ದಾನೆಯೇ ಹೊರತು ಬಿಜೆಪಿ ಪಕ್ಷಕ್ಕಲ್ಲ ಎಂದು ಆಮ್ ಆದ್ಮಿ ಪಕ್ಷದ ಉಚ್ಛಾಟಿತ ಸಚಿವ ಕಪಿಲ್ ಮಿಶ್ರಾ ಅವರ ತಾಯಿ ಡಾ.ಅನ್ನಪೂರ್ಣ ಮಿಶ್ರಾ ಅವರು ಶುಕ್ರವಾರ...
ಆಮ್ ಆದ್ಮಿ ಪಕ್ಷದ ಉಚ್ಛಾಟಿತ ಸಚಿವ ಕಪಿಲ್ ಮಿಶ್ರಾ ಅವರ ತಾಯಿ ಡಾ.ಅನ್ನಪೂರ್ಣ ಮಿಶ್ರಾ
ಆಮ್ ಆದ್ಮಿ ಪಕ್ಷದ ಉಚ್ಛಾಟಿತ ಸಚಿವ ಕಪಿಲ್ ಮಿಶ್ರಾ ಅವರ ತಾಯಿ ಡಾ.ಅನ್ನಪೂರ್ಣ ಮಿಶ್ರಾ
Updated on
ನವದೆಹಲಿ: ನನ್ನ ಮಗನ ಮೇಲೆ ನನಗೆ ಹೆಮ್ಮೆಯಿದೆ. ನನ್ನ ಪುತ್ರ ಸತ್ಯಕ್ಕೆ ಏಜೆಂಟ್ ಆಗಿದ್ದಾನೆಯೇ ಹೊರತು ಬಿಜೆಪಿ ಪಕ್ಷಕ್ಕಲ್ಲ ಎಂದು ಆಮ್ ಆದ್ಮಿ ಪಕ್ಷದ ಉಚ್ಛಾಟಿತ ಸಚಿವ ಕಪಿಲ್ ಮಿಶ್ರಾ ಅವರ ತಾಯಿ ಡಾ.ಅನ್ನಪೂರ್ಣ ಮಿಶ್ರಾ ಅವರು ಶುಕ್ರವಾರ ಹೇಳಿದ್ದಾರೆ. 
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ನನ್ನ ಪುತ್ರ ಬಿಜೆಪಿ ಪಕ್ಷದ ಏಜೆಂಟ್ ಆಗಿದ್ದಾನೆಂದು ಆರೋಪಿಸಲಾಗುತ್ತಿದೆ. ಕೇಜ್ರಿವಾಲ್ ಅವರು ಈ ರೀತಿಯಾಗಿ ವರ್ತಿಸುತ್ತಾರೆಂದು ಎಂದಿಗೂ ಆಲೋಚಿಸಿರಲಿಲ್ಲ. ಕೇಜ್ರಿವಾಲ್ ಅವರು ಮೊದಲು ಟ್ಯಾಂಕರ್ ಹಗರಣ ಕುರಿತಂತೆ ಮಾತನಾಡಬೇಕಿದೆ. ಆಪ್ ಗೆ ಸೇರ್ಪಡೆಗೊಳ್ಳಬೇಕೆಂದು ನನ್ನ ಮಗ ಎಂದಿಗೂ ಚಿಂತಿಸಿರಲಿಲ್ಲ. ಆದರೆ, ಕೇಜ್ರಿವಾಲ್ ಅವರೇ ಕಪಿಲ್ ಮಿಶ್ರಾ ಆಪ್'ಗೆ ಸೇರ್ಪಡೆಗೊಳಿಸಬೇಕೆಂದು ಬಯಸಿದ್ದರು ಎಂದು ಹೇಳಿದ್ದಾರೆ. 
ನನ್ನ ಮಗ ಇಂದು ಸತ್ಯಾಗ್ರಹ ಮಾಡುತ್ತಿರುವುದಕ್ಕೆ ನನಗೆ ಹೆಮ್ಮೆಯಿದೆ. ನನ್ನ ಮಗ ಸತ್ಯಕ್ಕೆ ಏಜೆಂಟ್ ಆಗಿದ್ದಾನೆಯೇ ಹೊರತು ಬಿಜೆಪಿ ಪಕ್ಷಕ್ಕಲ್ಲ. ಕಪಿಲ್ ಮಿಶ್ರಾನನ್ನು ಉಚ್ಛಾಟನೆ ಮಾಡುವ ಮೂಲಕ ಕೇಜ್ರಿವಾಲ್ ಅವರು ತಾವು ಎಂತಹ ವ್ಯಕ್ತಿಯೆಂಬುದನ್ನು ತೋರ್ಪಡಿಸಿಕೊಂಡಿದ್ದಾರೆ. 
ಕೇಜ್ರಿವಾಲ್ ಗಿಂತ ಕಪಿಲ್ ಮಿಶ್ರಾ ಶ್ರೇಷ್ಠ ವ್ಯಕ್ತಿಯಾಗಿದ್ದಾನೆ. ಆತನ ವಿರುದ್ಧ ಯಾವುದೇ ಭ್ರಷ್ಟಾಚಾರ ಆರೋಪಗಳಿಲ್ಲ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com