ಗಡಿಯಲ್ಲಿ ಪಾಕ್ ಉದ್ಧಟತನ: ರಜೌರಿಯಲ್ಲಿ 2 ನಿರಾಶ್ರಿತ ಶಿಬಿರಗಳ ಸ್ಥಾಪನೆ

ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಪದೇ ಪದೇ ತನ್ನ ಉದ್ಧಟತನವನ್ನು ಪ್ರದರ್ಶಿಸುತ್ತಿದ್ದು, ಶೆಲ್ ದಾಳಿಗಳಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಸ್ಥಳೀಯರ ನೆರವಿಗೆ ಬಂದಿರುವ ಸರ್ಕಾರ ರಜೌರಿ ಜಿಲ್ಲೆಯಲ್ಲಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಪದೇ ಪದೇ ತನ್ನ ಉದ್ಧಟತನವನ್ನು ಪ್ರದರ್ಶಿಸುತ್ತಿದ್ದು, ಶೆಲ್ ದಾಳಿಗಳಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಸ್ಥಳೀಯರ ನೆರವಿಗೆ ಬಂದಿರುವ ಸರ್ಕಾರ ರಜೌರಿ ಜಿಲ್ಲೆಯಲ್ಲಿ 2 ನಿರಾಶ್ರಿತ ಶಿಬಿರಗಳನ್ನು ಸ್ಥಾಪನೆ ಮಾಡಿದೆ. 
ನೌಶೆರಾ ಬಳಿ 2 ನಿರಾಶ್ರಿತ ಶಿಬಿರಗಳನ್ನು ಸ್ಥಾಪನೆ ಮಾಡಲಾಗಿದ್ದು, 15 ಕುಟುಂಬಗಳ ಒಟ್ಟು 50 ಮಂದಿ ಶಿಬಿರದಲ್ಲಿ ನೆಲೆಸಿದ್ದಾರೆಂದು ರಜೌರಿ ಉಪ ಆಯುಕ್ತ ಶಾಹಿತ್ ಇಕ್ಬಾರ್ ಚೌಧರಿಯವರು ಹೇಳಿದ್ದಾರೆ. 
ಗಡಿಯಲ್ಲಿ ಪಾಕಿಸ್ತಾನ ಸೇನೆ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದು, ಶೆಲ್ ಗಳ ದಾಳಿಗೆ 5-6 ಗುಡ್ಡಗಳು ನಾಶಗೊಂಡಿವೆ. ಅಗತ್ಯ ಬಿದ್ದರೆ ಹೆಚ್ಚುವರಿ ಶಿಬಿರಗಳನ್ನು ಸ್ಥಾಪನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. 
ಶೆಲ್ ದಾಳಿಯಿಂದಾಗಿ 27 ಕುಟಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಪಾಕಿಸ್ತಾನ ದಾಳಿಗೆ 40ಕ್ಕೂ ಹೆಚ್ಚು ಕೃಷಿ ಪ್ರಾಣಿಗಳು ಸಾವನ್ನಪ್ಪಿವೆ ಎಂದು ಇಕ್ಬಾಲ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com