ವಿಷಯಾಂತರ ಮಾಡಲು ಆಪ್ ಹೊಸ ನಾಟಕ ಮಾಡಬಹುದು: ಕಪಿಲ್ ಮಿಶ್ರಾ ಎಚ್ಚರಿಕೆ

4 ದಿನಗಳಿಂದ ಉಪವಾಸ ಪ್ರತಿಭಟನೆ ಕೈಗೊಂಡಿರುವ ಆಮ್ ಆದ್ಮಿ ಪಕ್ಷದ ಮಾಜಿ ಸಚಿವ ಕಪಿಲ್ ಮಿಶ್ರಾ, ಆಮ್ ಆದ್ಮಿ ಪಕ್ಷ ವಿಷಯಾಂತರ ಮಾಡಲು ಹೊಸ ನಾಟಕವನ್ನು ಪ್ರಾರಂಭಿಸಬಹುದು ಎಂದು ಎಚ್ಚರಿಸಿದ್ದಾರೆ.
ಕಪಿಲ್ ಮಿಶ್ರ
ಕಪಿಲ್ ಮಿಶ್ರ
Updated on: 
ನವದೆಹಲಿ: 4 ದಿನಗಳಿಂದ ಉಪವಾಸ ಪ್ರತಿಭಟನೆ ಕೈಗೊಂಡಿರುವ ಆಮ್ ಆದ್ಮಿ ಪಕ್ಷದ ಮಾಜಿ ಸಚಿವ ಕಪಿಲ್ ಮಿಶ್ರಾ, ಆಮ್ ಆದ್ಮಿ ಪಕ್ಷ ವಿಷಯಾಂತರ ಮಾಡಲು ಹೊಸ ನಾಟಕವನ್ನು ಪ್ರಾರಂಭಿಸಬಹುದು ಎಂದು ಎಚ್ಚರಿಸಿದ್ದಾರೆ. 
ವಿದೇಶ ಪ್ರವಾಸದ ವಿವಾದದಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಆಮ್ ಆದ್ಮಿ ಪಕ್ಷ ಹೊಸ ನಾಟಕ ಪ್ರಾರಂಭಿಸುವ ಸಾಧ್ಯತೆ ಇದೆ ಎಂದು ಕಪಿಲ್ ಶರ್ಮಾ ಟ್ವೀಟ್ ಮಾಡಿದ್ದಾರೆ. ಕಳ್ಳ ದಾಖಲೆ, ಸಾಕ್ಷಿಗಳನ್ನೆಲ್ಲಾ ತನ್ನ ಕೈಗೆ ನೀಡುವಂತೆ ಆಗ್ರಹಿಸುತ್ತಿದ್ದಾನೆ. ಆ ನಂತರ ತಾನೇ ನ್ಯಾಯಾಧೀಶನಾಗಿ ತನ್ನನ್ನು ನಿರಪರಾಧಿ ಎಂದು ಘೋಷಿಸಿಕೊಳ್ಳುತ್ತಾನೆ ಎಂದು ಆಮ್ ಆದ್ಮಿ ಪಕ್ಷ ಹಾಗೂ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಪಿಲ್ ಮಿಶ್ರಾ ಆರೋಪ ಮಾಡಿದ್ದಾರೆ. 
ಇದೇ ವೇಳೆ ಟ್ವಿಟರ್ ನಲ್ಲಿ ಮಹಾಭಾರತದ ಚಿತ್ರ ಹಾಕಿರುವ ಕಪಿಲ್ ಶರ್ಮಾ, ನಿಮ್ಮ ಎಲ್ಲಾ ಸಂಚು, ಉಪಾಯಗಳಿಗೆ ನಾನು ಕೊಡಲು ಸಾಧ್ಯವಿರುವುದು ಇದೊಂದೇ ಉತ್ತರ. ಮಹಾಭಾರತ ಸಂಚು, ಉಪಾಯಗಳ ಹೊರತಾಗಿಯೂ ಕೆಡುಕಿನ ವಿರುದ್ಧ ಒಳ್ಳೆಯದರ ಗೆಲುವನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದ್ದಾರೆ. 
ಆಮ್ ಆದ್ಮಿ ಪಕ್ಷದ 5 ನಾಯಕರ ವಿದೇಶ ಪ್ರವಾಸಕ್ಕೆ ಬಂದಿರುವ ವಿದೇಶಿ ದೇಣಿಗೆ ಕುರಿತು ಅರವಿಂದ್ ಕೇಜ್ರಿವಾಲ್ ಮಾಹಿತಿಯನ್ನು ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿ ಕಪಿಲ್ ಮಿಶ್ರಾ ನಾಲ್ಕು ದಿನಗಳಿಂದ ಉಪವಾಸ ಪ್ರತಿಭಟನೆ ಕೈಗೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com