ಬದಲಾವಣೆಗೆ ನಾಂದಿ ಹಾಡಿದ ಕೊಚ್ಚಿ ಮೆಟ್ರೊ, 23 ಲೈಂಗಿಕ ಅಲ್ಪಸಂಖ್ಯಾತರಿಗೆ ಉದ್ಯೋಗ

ಕೊಚ್ಚಿ ಮೆಟ್ರೊ 23 ಮಂದಿ ಲೈಂಗಿಕ ಅಲ್ಪಸಂಖ್ಯಾತರಿಗೆ ಉದ್ಯೋಗ ನೀಡುವ ಮೂಲಕ ಹೊಸ ಬದಲಾವಣಗೆ ನಾಂದಿ....
ವಿನ್ಸಿ
ವಿನ್ಸಿ
ಕೊಚ್ಚಿ: ಕೊಚ್ಚಿ ಮೆಟ್ರೊ 23 ಮಂದಿ ಲೈಂಗಿಕ ಅಲ್ಪಸಂಖ್ಯಾತರಿಗೆ ಉದ್ಯೋಗ ನೀಡುವ ಮೂಲಕ ಹೊಸ ಬದಲಾವಣಗೆ ನಾಂದಿ ಹಾಡಿದ್ದು, ಭಿಕ್ಷೆಗಾಗಿ ರೈಲನ್ನು ಬಳಸುತ್ತಿದ್ದ ತೃತೀಯ ಲಿಂಗಿಗಳು ಈಗ ರೈಲು ಪ್ರಯಾಣಿಕರ ಸೇವೆಗೆ ಸಜ್ಜಾಗಿದ್ದಾರೆ.
ಲೈಂಗಿಕ ಅಲ್ಪಸಂಖ್ಯಾತರು ಎಂದರೆ ಮೂಗು ಮುರಿಯುವ ಕಾಲದಲ್ಲಿ, ಸಮಾಜ ಅವರನ್ನು ಸಮಾಜದ ಭಾಗ ಎಂದು ಇನ್ನೂ ಸಂಪೂರ್ಣವಾಗಿ ಒಪ್ಪದ ಕಾಲದಲ್ಲಿ ಕೇರಳದ ಕೊಚ್ಚಿ ರೈಲು ನಿಗಮ 23 ಮಂದಿ ಲೈಂಗಿಕ ಅಲ್ಪಸಂಖ್ಯಾತರನ್ನು ಸೇವೆಗೆ ನೇಮಿಸಿಕೊಂಡಿದೆ. ಈ ಮೂಲಕ ನಿಗಮ ಹೊಸ ಹೆಜ್ಜೆ ಇಟ್ಟಿದೆ.
ನಿಗಮದ ಟಿಕೆಟ್‌ ಕೌಂಟರ್‌ ಮತ್ತು ನಿಲ್ದಾಣ ಶುಚಿಗೊಳಿಸುವ ಕೆಲಸಗಳಿಗೆ ಲೈಂಗಿಕ ಅಲ್ಪಸಂಖ್ಯಾತರನ್ನು ನೇಮಿಸಿಕೊಳ್ಳಲಾಗಿದೆ. ಈ ತಿಂಗಳ ಕೊನೆಗೆ ಈ ಎಲ್ಲಾ 23 ಮಂದಿ ಕೆಲಸ ಆರಂಭಿಸಲಿದ್ದಾರೆ.
ಮೆಟ್ರೊ ರೈಲು ನಿಲ್ದಾಣದ ವಿವಿಧ ಹುದ್ದೆಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೂ ಉದ್ದೋಗ ನೀಡಲಾಗಿದ್ದು, ಮಹಿಳೆಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಕೊಚ್ಚಿ ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಇಲಿಯಾಸ್ ಜಾರ್ಜ್ ಅವರು ತಿಳಿಸಿದ್ದಾರೆ. ಅಲ್ಲದೆ ಈ ನಿರ್ಧಾರದಿಂದಾಗಿ ಲೈಂಗಿಕ ಅಲ್ಪಸಂಖ್ಯಾತರ ಸಮುದಾಯದಲ್ಲಿ ಬದಲಾವಣೆಯಾಗಲಿದೆ ಎಂದು ಹೇಳಿದ್ದಾರೆ. 
ಕೊಚ್ಚಿ ಮೆಟ್ರೊ ಲೈಂಗಿಕ ಅಲ್ಪ ಸಂಖ್ಯಾತರಿಗೆ ಉದ್ಯೋಗ ನೀಡಿದ ಮೊದಲ ಸರ್ಕಾರಿ ಸಂಸ್ಥೆಯಾಗಿದ್ದು, ಇನ್ನು ಮುಂದೆ ಕೇರಳದ ಇತರೆ ಸರ್ಕಾರಿ ಸಂಸ್ಥೆಗಳು ಅವರಿಗೆ ಉದ್ಯೋಗ ನೀಡುವ ವಿಶ್ವಾಸವಿದೆ ಎಂದಿದ್ದಾರೆ. 
ಕೊಚ್ಚಿ ರೈಲು ನಿಗಮ ನಮ್ಮನ್ನು ಕೆಲಸಕ್ಕೆ ನೇಮಿಸಿಕೊಂಡಿರುವುದು ತುಂಬಾ ಸಂತೋಷ ತಂದಿದೆ. ನಾವು ನಿಗಮದಲ್ಲಿ ಕೆಲಸಕ್ಕೆ ಸೇರಿದ್ದೇವೆ ಎಂಬ ಬಗ್ಗೆ ಹೆಮ್ಮೆ ಇದೆ. ಮೆಟ್ರೊ ಪ್ರಯಾಣಿಕರ ಸೇವೆ ಮಾಡಲು ನಾವು ಉತ್ಸುಕರಾಗಿದ್ದೇವೆ ಎಂದು ಹೊಸದಾಗಿ ಕೆಲಸಕ್ಕೆ ಸೇರಿರುವ ಲೈಂಗಿಕ ಅಲ್ಪಸಂಖ್ಯಾತರಾದ ವಿನ್ಸಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com