ಮುಕ್ತ, ಬಹುಪಕ್ಷೀಯ ಜಗತ್ತಿಗೆ ಚೀನಾ ಬಲವಾದ ಆಧಾರ ಸ್ತಂಭ: ವಿಶ್ವಸಂಸ್ಥೆ ಮುಖ್ಯಸ್ಥ

ಒನ್ ಬೆಲ್ಟ್, ಒನ್ ರೋಡ್ ಕಾರ್ಯಕ್ರಮ ಮಾಡುವ ಮೂಲಕ ಮುಕ್ತ ಹಾಗೂ ಬಹುಪಕ್ಷೀಯ ಜಗತ್ತಿಗೆ ತಾನು ಬಲವಾದ ಆಧಾರ ಸ್ತಂಭ ಎಂಬುದನ್ನು ಚೀನಾ ತೋರಿಸಿದೆ
ಬೀಜಿಂಗ್: ಅಂತಾರಾಷ್ಟ್ರೀಯ ಸಹಕಾರದ ವಿಷಯದಲ್ಲಿ ಒನ್ ಬೆಲ್ಟ್, ಒನ್ ರೋಡ್ ಕಾರ್ಯಕ್ರಮ ಮಾಡುವ ಮೂಲಕ ಮುಕ್ತ ಹಾಗೂ ಬಹುಪಕ್ಷೀಯ ಜಗತ್ತಿಗೆ ತಾನು ಬಲವಾದ ಆಧಾರ ಸ್ತಂಭ ಎಂಬುದನ್ನು ಚೀನಾ ತೋರಿಸಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
ಚೀನಾದಲ್ಲಿ ನಡೆಯುತ್ತಿರುವ ಒನ್ ಬೆಲ್ಟ್ ಒನ್ ರೋಡ್ ಕಾರ್ಯಕ್ರಮದಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿ ಮಾಡಿದ ಗುಟೆರಸ್, ಒಬಿಒಆರ್ ಚೀನಾದ ದೂರದೃಷ್ಟಿ ಹಾಗೂ ಕಾರ್ಯತಂತ್ರದ ದೃಷ್ಟಿಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. 
ಚೀನಾದ ಬೆಲ್ಟ್ ಹಾಗೂ ರೋಡ್ ಯೋಜನೆ ಆರ್ಥಿಕ ಜಾಗತೀಕರಣವನ್ನು ಸಮತೆತೋಲಿತ ಅಭಿವೃದ್ಧಿಯೆಡೆಗೆ ಮುನ್ನಡೆಸಲಿದ್ದು, ಜಾಗತಿಕ ಸಮಸ್ಯೆಗಳಿಗೆ ಅಂತಾರಾಷ್ಟ್ರೀಯ ಸಹಕಾರದಿಂದ ಪರಿಹಾರ ಕಂಡುಕೊಳ್ಳುವುದಕ್ಕೆ ಸಹಕಾರಿಯಾಗಲಿದೆ ಎಂದು ಗುಟೆರಸ್ ಅಭಿಪ್ರಾಯಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com