ಸಿಪಿಇಸಿಯನ್ನು ರಾಜಕೀಯಗೊಳಿಸಬೇಡಿ: ಪಾಕ್ ಪ್ರಧಾನಿ ಷರೀಫ್

ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆಯಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಮುಕ್ತ ಅವಕಾಶವಿದೆ, ಸಿಪಿಇಸಿಯನ್ನು ರಾಜಕೀಯಗೊಳಿಸಬೇಡಿ ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ.
ನವಾಜ್ ಷರೀಫ್
ನವಾಜ್ ಷರೀಫ್
ಬೀಜಿಂಗ್: ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆಯಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಮುಕ್ತ ಅವಕಾಶವಿದೆ, ಸಿಪಿಇಸಿಯನ್ನು ರಾಜಕೀಯಗೊಳಿಸಬೇಡಿ ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ. 
ಭಾರತ ಚೀನಾದ ಒನ್ ಬೆಲ್ಟ್ ಹಾಗೂ ಒನ್ ರೋಡ್ ಸಭೆಗೆ ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ಷರೀಫ್ ಈ ಹೇಳಿಕೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. "ಸಿಪಿಇಸಿ ಯೋಜನೆಯಲ್ಲಿ ಪಾಲ್ಗೊಳ್ಳಲು ಎಲ್ಲಾ ಪ್ರಾದೇಶಿಕ ರಾಷ್ಟ್ರಗಳಿಗೂ ಮುಕ್ತ ಅವಕಾಶವಿದೆ ಎಂಬುದನ್ನು ಸ್ಪಷ್ಟಪಡಿಸುತ್ತೇನೆ, ಸಿಪಿಇಸಿಗೆ ಭೂಗಡಿಗಳಿಲ್ಲ, ಸಿಪಿಇಸಿ ಯೋಜನೆಯನ್ನು ರಾಜಕೀಯಗೊಳಿಸಬೇಡಿ, ಚೀನಾದ ಒಬಿಒಆರ್ ನಿಂದ ಅತ್ಯುತ್ತಮ ನೆರೆಹೊರೆಯನ್ನು ನಿರ್ಮಿಸಬಹುದು ಎಂದು ನವಾಜ್ ಷರೀಫ್ ಹೇಳಿದ್ದಾರೆ 
ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆ ಹಾದುಹೋಗುತ್ತಿರುವುದನ್ನು ವಿರೋಧಿಸಿ ಭಾರತ ಚೀನಾದಲ್ಲಿ ನಡೆಯುತ್ತಿರುವ ಒನ್ ಬೆಲ್ಟ್ ಹಾಗೂ ಒನ್ ರೋಡ್ ಕಾರ್ಯಕ್ರಮದಿಂದ ಹೊರಗುಳಿದಿದೆ. 
ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಸಿಲ್ಕ್ ರೋಡ್ ಯೋಜನೆಗೆ ಒಬಿಒಆರ್ ಎಂದು ಅಧಿಕೃತವಾಗಿ ನಾಮಕರಣ ಮಾಡಲಾಗಿದೆ. ನೆರೆರಾಷ್ಟ್ರಗಳು ಹಾಗೂ ವಿಶ್ವಾದ್ಯಂತ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸಲು ಈ ಯೋಜನೆ ನೆರವಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com