ನರೇಂದ್ರ ಮೋದಿ
ನರೇಂದ್ರ ಮೋದಿ

ಮೇ 26ರಂದು ದೇಶದ ಅತ್ಯಂತ ಉದ್ದದ ಸೇತುವೆಗೆ ಪ್ರಧಾನಿ ಮೋದಿ ಚಾಲನೆ

ಅಸ್ಸಾಂನ ಬ್ರಹ್ಮಪುತ್ರಾ ನದಿಯ ಮೇಲೆ ನಿರ್ಮಿಸಲಾಗಿರುವ ಭಾರತದ ಅತ್ಯಂತ ಉದ್ದದ ಸೇತುವೆ ಧೋಲಾ-ಸಾದಿಯಾವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೇ...
ದಿಸ್ಪುರ್: ಅಸ್ಸಾಂನ ಬ್ರಹ್ಮಪುತ್ರಾ ನದಿಯ ಮೇಲೆ ನಿರ್ಮಿಸಲಾಗಿರುವ ಭಾರತದ ಅತ್ಯಂತ ಉದ್ದದ ಸೇತುವೆ ಧೋಲಾ-ಸಾದಿಯಾವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೇ 26ರಂದು ಉದ್ಘಾಟಿಸಲಿದ್ದಾರೆ. 
ಮೇ 26ಕ್ಕೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರೈಸಲಿದ್ದು ಸೇತುವೆ ಉದ್ಘಾಟನೆ ಮೂಲಕ ಪ್ರಧಾನಿ ಮೋದಿ ಸಡಗರಕ್ಕೆ ಚಾಲನೆ ನೀಡಲಿದ್ದಾರೆ. ಈ ಸೇತುವೆಯ ಉದ್ಧ 9.15 ಕಿ.ಮೀ ಉದ್ಧವಿದ್ದು ಈ ಸೇತುವೆ ಮುಂಬೈನ ಬಾಂದ್ರಾ-ವರ್ಲಿ ಸೀಲಿಂಕ್ ಗಿಂತ 3.55 ಕಿ.ಮೀ ಹೆಚ್ಚು ಉದ್ದವಾಗಿದೆ. 
ಈ ಸೇತುವೆಯು ಚೀನಾದ ಗಡಿಗೆ ಹತ್ತಿರವಿರುವುದರಿಂದ ಸಂಘರ್ಷದ ಸಮಯಗಳಲ್ಲಿ ಸೇನೆಯ ತ್ವರಿತ ಚಲನವಲನಗಳಿಗೆ ನೆರವಾಗಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 
2011ರಲ್ಲಿ ಆರಂಭಗೊಂಡಿದ್ದ ಈ ಸೇತುವೆ ನಿರ್ಮಾಣಕ್ಕೆ 950 ಕೋಟಿ ರುಪಾಯಿ ವೆಚ್ಚವಾಗಿದ್ದು ಈ ಸೇತುವೆ ಮಿಲಿಟರಿ ಟ್ಯಾಂಕ್ ಗಳ ಓಡಾಟವನ್ನು ತಾಳಿಕೊಳ್ಳುವಂತೆ ಈ ಸೇತುವೆಯನ್ನು ವಿನ್ಯಾಸಗೊಳಿಸಲಾಗಿದೆ. 

Related Stories

No stories found.

Advertisement

X
Kannada Prabha
www.kannadaprabha.com