ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಗದ್ದಲ ಕೋಲಾಹಲ: ರಾಜ್ಯಪಾಲರೆಡೆಗೆ ಪೇಪರ್ ಬಾಲ್ ಎಸೆದ ವಿಪಕ್ಷ ಸದಸ್ಯರು

ಉತ್ತರ ಪ್ರದೇಶ ಸರ್ಕಾರದ ಮೊದಲ ವಿಧಾನ ಸಭೆ ಅಧಿವೇಶನದಲ್ಲಿ ಭಾರೀ ಗದ್ದಲ ಕೋಲಾಹಲ ಸೃಷ್ಟಿಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ..
ಉತ್ತರ ಪ್ರದೇಶ ವಿಧಾನಸಭೆ
ಉತ್ತರ ಪ್ರದೇಶ ವಿಧಾನಸಭೆ
ಲಕ್ನೋ: ಉತ್ತರ ಪ್ರದೇಶ ಸರ್ಕಾರದ ಮೊದಲ ವಿಧಾನ ಸಭೆ ಅಧಿವೇಶನದಲ್ಲಿ ಭಾರೀ ಗದ್ದಲ ಕೋಲಾಹಲ ಸೃಷ್ಟಿಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ವಿಪಕ್ಷಗಳು ಸದನದಲ್ಲಿ ಪ್ರತಿಭಟನೆ ನಡೆಸಿವೆ.
ರಾಜ್ಯಪಾಲ ರಾಮನಾಯಕ್ ಉಭಯ ಸದನಗಳನ್ನುದ್ದೇಶಿಸಿ ಭಾಷಣ ಮಾಡುವ ವೇಳೆ ಸಮಾಜವಾದಿ ಮತ್ತು ಬಿಎಸ್ ಪಿ ಶಾಸಕರು ಸರ್ಕಾರದ ವಿರುದ್ಧ ಘೋಷಣೆ ಕೂಗಲು ಆರಂಭಿಸಿದರು. ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ವಿರೋಧ ಪಕ್ಷಗಳ ಶಾಸಕರು ಗದ್ದಲ ಸೃಷ್ಟಿಸಿದರು.
ಈ ವೇಳೆ ಮದ್ಯ ಪ್ರವೇಶಿಸಿದ ವಿಧಾನ ಸಭೆ ಸ್ಪೀಕರ್ ಹೃದಯ ನಾರಾಯಣ ದೀಕ್ಷಿತ್ ಸದನ ನಡೆಯಲು ಸರ್ವಪಕ್ಷ ಸಭೆ ಕರೆಯುವಂತೆ ಸೂಚಿಸಿದರು.
ರಾಜ್ಯಪಾಲರು ಭಾಷಣ ಓದುವಾಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಸ್ಥಿತರಿದ್ದರು. ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಲು ಯತ್ನಿಸಿದ ವಿಪಕ್ಷಗಳ ಸದಸ್ಯರು ಶಿಳ್ಳೆ ಹೊಡೆದು, ಪೇಪರ್ ಬಾಲ್ ಗಳನ್ನು ಎಸೆದಾಡಿದರು. ಈ ವೇಳೆ ಮಾರ್ಷಲ್ಸ್ ಗಳು ಅವರನ್ನು ಕಡತಗಳ ಸಮೇತ ಎತ್ತಿಕೊಂಡು ಹೊರ ಹಾಕಲು ಪ್ರಯತ್ನಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com