ಪ್ರತಿ 65 ಸೆಕೆಂಡ್ ಗೆ 1 ವಿಮಾನ: ಅತಿ ಹೆಚ್ಚು ವಿಮಾನ ಓಡಾಡುವ ರನ್ ವೇ ಹೊಂದಿರುವ ಮುಂಬೈ ಏರ್ ಪೋರ್ಟ್

ಪ್ರತಿ 65 ಸೆಕೆಂಡ್ ಗೆ 1 ವಿಮಾನ ಅಥವಾ ಒಂದು ದಿನದಲ್ಲಿ 837 ವಿಮಾನಗಳು ಸಂಚರಿಸುವ ಮುಂಬೈನ ವಿಮಾನ ನಿಲ್ದಾಣ ಅತಿ ಹೆಚ್ಚು ವಿಮಾನಗಳು ಓಡಾಡುವ ರನ್ ವೇ ಎಂಬ ಖ್ಯಾತಿ ಪಡೆದಿದೆ.
ಮುಂಬೈ ವಿಮಾನ ನಿಲ್ದಾಣ,
ಮುಂಬೈ ವಿಮಾನ ನಿಲ್ದಾಣ,
ಮುಂಬೈ: ಪ್ರತಿ 65 ಸೆಕೆಂಡ್ ಗೆ 1 ವಿಮಾನ ಅಥವಾ ಒಂದು ದಿನದಲ್ಲಿ 837 ವಿಮಾನಗಳು ಸಂಚರಿಸುವ ಮುಂಬೈನ ವಿಮಾನ ನಿಲ್ದಾಣ ಅತಿ ಹೆಚ್ಚು ವಿಮಾನಗಳು ಓಡಾಡುವ ರನ್ ವೇ ಎಂಬ ಖ್ಯಾತಿ ಪಡೆದಿದೆ. 
ಒಂದೇ ರನ್ ವೇ ಹೊಂದಿರುವ ಮುಂಬೈ ನ ವಿಮಾನ ನಿಲ್ದಾಣ, ಲಂಡನ್ ನ ಗ್ಯಾಟ್ವಿಕ್ ವಿಮಾನ ನಿಲ್ದಾಣವನ್ನು ಹಿಂದಿಕ್ಕಿದ್ದು, ಪ್ರಯಾಣಿಕರ ಸಂಖ್ಯೆಯಲ್ಲೂ ಲಂಡನ್ ನ ಗ್ಯಾಟ್ವಿಕ್ ವಿಮಾನ ನಿಲ್ದಾಣವನ್ನು ಹಿಂದಿಕ್ಕಿದೆ. 2017 ರಲ್ಲಿ ಮುಂಬೈ ನ ವಿಮಾನ ನಿಲ್ದಾಣದಲ್ಲಿ ಒಟ್ಟು 45.2 ಮಿಲಿಯನ್ ಪ್ರಯಾಣಿಕರು ಸಂಚರಿಸಿದ್ದರೆ, ಲಂಡನ್ ನ ಗ್ಯಾಟ್ವಿಕ್ ವಿಮಾನ ನಿಲ್ದಾಣದಲ್ಲಿ 44 ಮಿಲಿಯನ್ ಪ್ರಯಾಣಿಕರು ಸಂಚರಿಸಿದ್ದಾರೆ. 
ನವಿ ಮುಂಬೈ ನಲ್ಲಿ ಮತ್ತೊಂದು ವಿಮಾನ ನಿಲ್ದಾಣ ಶೀಘ್ರವೇ ಕಾರ್ಯಾರಂಭ ಮಾಡಲಿದ್ದು, ಮುಂಚೂಣಿಯಲ್ಲಿರುವ ನ್ಯೂಯಾರ್ಕ್, ಲಂಡನ್, ದುಬೈ, ಸಿಂಗಪೂರ್ ನ ವಿಮಾನ ನಿಲ್ದಾಣಗಳಲ್ಲಿ ಒಂದಕ್ಕಿಂತ ಹೆಚ್ಚು ರನ್ ವೇ ಗಳಿವೆ. ಆದರೆ ಮುಂಬೈ ನಲ್ಲಿ ಕಾರ್ಗೊ ಹಾಗೂ ಪ್ರಯಾಣಿಕ ವಿಮಾನಗಳಿಗೆ ಇರುವುದು ಒಂದೇ ರನ್ ವೇ ಆಗಿದ್ದು, ಅತ್ಯಂತ ಹೆಚ್ಚು ವಿಮಾನಗಳು ಸಂಚರಿಸುವ ವಿಮಾನ ನಿಲ್ದಾಣ ಎಂಬ ಖ್ಯಾತಿಗೆ ಪಾತ್ರವಾಗಿದೆ. 
2017 ರ ಆರ್ಥಿಕ ವರ್ಷದಲ್ಲಿ ವಿಮಾನ ನಿಲ್ದಾಣ ಶೇ.8 ರಷ್ಟು ಅಭಿವೃದ್ಧಿ ಹೊಂದಿದ್ದು, ಜಿವಿಕೆ ಗ್ರೂಪ್ ಏರ್ ಪೋರ್ಟ್ ನ ಕಾರ್ಯಾಚರಣೆಗಳನ್ನು ನಿರ್ವಹಣೆ ಮಾಡುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com