ಸಾಮಾಜಿಕ ಮಾಧ್ಯಮವನ್ನು ಪ್ರೆಸ್ ಕೌನ್ಸಿಲ್ ಅಡಿ ತರಲು ಸರ್ಕಾರಕ್ಕೆ ಶಿಫಾರಸು

ಮಾಧ್ಯಮದ ಕಾವಲು ನಾಯಿ ಎಂದು ಕರೆಯಲ್ಪಡುವ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದಡಿ ಸಾಮಾಜಿಕ ಮಾಧ್ಯಮವನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಇಂದೋರ್: ಮಾಧ್ಯಮದ ಕಾವಲು ನಾಯಿ ಎಂದು ಕರೆಯಲ್ಪಡುವ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದಡಿ ಸಾಮಾಜಿಕ ಮಾಧ್ಯಮವನ್ನು ತರಬೇಕು ಎಂದು ಅದರ ಅಧ್ಯಕ್ಷ ನ್ಯಾಯಾಧೀಶ(ನಿವೃತ್ತ) ಸಿ.ಕೆ.ಪ್ರಸಾದ್ ಹೇಳಿದ್ದಾರೆ.
ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಅಡಿಯಲ್ಲಿ ಸಾಮಾಜಿಕ ಮಾಧ್ಯಮವನ್ನು ತರಬೇಕು. ಸಾಮಾಜಿಕ ಮಾಧ್ಯಮ ಮುದ್ರಣ ಮಾಧ್ಯಮಕ್ಕಿಂತ ಬಹಳ ಬೇಗನೆ ಜನರಿಗೆ ತಲುಪುತ್ತದೆ. ಸಾಮಾಜಿಕ ಮಾಧ್ಯಮದ ಮೂಲಕ ಯಾವ ವಿಷಯ ಬೇಕಾದರೂ ವಿಶ್ವಾದ್ಯಂತ ಸೆಕೆಂಡುಗಳಲ್ಲಿ ಜನರಿಗೆ ತಲುಪುತ್ತದೆ ಎಂದು ಅವರು ಹೇಳಿದರು.
ಮುದ್ರಣ ಮಾಧ್ಯಮದಂತೆ ಸಾಮಾಜಿಕ ಮಾಧ್ಯಮ ಕೂಡ ಅದೇ ವರ್ಣಮಾಲೆಯನ್ನು ಬಳಸುತ್ತದೆ. ಹೀಗಾಗಿ ಸಾಮಾಜಿಕ ಮಾಧ್ಯಮವನ್ನು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದಿಂದ ಹೊರಗಿಡುವ ಅಗತ್ಯವೇನಿದೆ ಎಂದು ಕೇಳಿದರು.
ಆಳವಾದ ಚರ್ಚೆಯ ನಂತರ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ವ್ಯಾಪ್ತಿ ಸಾಮಾಜಿಕ ಹಾಗೂ ವಿದ್ಯುನ್ಮಾನ ಮಾಧ್ಯಮಗಳಿಗೆ ಸಹ ವಿಸ್ತರಣೆಯಾಗಬೇಕೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದೇವೆ. ಮತ್ತು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಬದಲಿಗೆ ಮೀಡಿಯಾ ಕೌನ್ಸಿಲ್ ಎಂದು ಇಡಬೇಕೆಂದು ಶಿಫಾರಸು ಮಾಡಿದ್ದೇವೆ ಎಂದರು.
ಮೀಡಿಯಾ ಕೌನ್ಸಿಲ್ ರಚನೆಗೆ ಸರ್ಕಾರ ಕಾನೂನನ್ನು ರಚಿಸಬೇಕು. ಇದು ಸರ್ಕಾರದ ಪರಿಗಣನೆಯ ಹಂತದಲ್ಲಿದೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com