ವಿದ್ಯುತ್ ಉತ್ಪಾದನೆಗೆ 10 ಪರಮಾಣು ರಿಯಾಕ್ಟರ್ ಸ್ಥಾಪನೆಗೆ ಕೇಂದ್ರ ಸಂಪುಟ ಒಪ್ಪಿಗೆ

ಪರಮಾಣು ವಿದ್ಯುತ್ ಉತ್ಪಾದನೆಗೆ 10 ಸ್ಥಳೀಯ ಒತ್ತಡದ ಭಾರ ಜಲ ರಿಯಾಕ್ಟರ್ಗಳನ್ನು(ಪಿಎಚ್ ಡಬ್ಲ್ಯುಆರ್) ಸ್ಥಾಪಿಸಲು...
ಕೇಂದ್ರ ಇಂಧನ ಖಾತೆ ಸಚಿವ ಪಿಯೂಷ್ ಗೋಯಲ್
ಕೇಂದ್ರ ಇಂಧನ ಖಾತೆ ಸಚಿವ ಪಿಯೂಷ್ ಗೋಯಲ್
ನವದೆಹಲಿ: ಪರಮಾಣು ವಿದ್ಯುತ್ ಉತ್ಪಾದನೆಗೆ 10 ಸ್ಥಳೀಯ ಒತ್ತಡದ ಭಾರ ಜಲ ರಿಯಾಕ್ಟರ್ಗಳನ್ನು(ಪಿಎಚ್ ಡಬ್ಲ್ಯುಆರ್) ಸ್ಥಾಪಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ.
ಕೇಂದ್ರ ಸಂಪುಟ 10 ಸ್ಥಳೀಯ ರಿಯಾಕ್ಟರ್ ಗಳ ಸ್ಥಾಪನೆಗೆ ಒಪ್ಪಿಗೆ ನೀಡಿದೆ ಎಂದು ಕೇಂದ್ರ ಇಂಧನ ಖಾತೆ ಸಚಿವ ಪಿಯೂಷ್ ಗೋಯಲ್ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ.  ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸಂಪುಟ ಸಭೆ ನಡೆಯಿತು.
ಹೊಸ ರಿಯಾಕ್ಟರ್ ಗಳು 7,000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಿದೆ. ಪ್ರಸ್ತುತ ಭಾರತ 6,780 ಮೆಗಾ ವ್ಯಾಟ್ ನ್ನು ಪರಮಾಣು ಮೂಲದಿಂದ ತಯಾರಿಸುತ್ತಿದೆ.
6,700 ಮೆಗಾ ವ್ಯಾಟ್ ಉತ್ಪಾದಿಸುವ ನ್ಯೂಕ್ಲಿಯರ್ ರಿಯಾಕ್ಟರ್ ಗಳು ಜಾರಿ ಹಂತದಲ್ಲಿದ್ದು ಅದು 2021-22 ರ ಹೊತ್ತಿಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com