ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ
ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ

ಮಹಿಳೆಯರೂ ತ್ರಿವಳಿ ತಲಾಖ್ ನೀಡಬಹುದು: ಕೋರ್ಟ್ ಗೆ ಮುಸ್ಲಿಮ್ ಕಾನೂನು ಮಂಡಳಿ

ದಿನಕ್ಕೊಂದೊಂದು ಹೇಳಿಕೆ ನೀಡುತ್ತಿರುವ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಈಗ ಪುರುಷರಂತೆ ಮಹಿಳೆಯರೂ ಸಹ ತ್ರಿವಳಿ ತಲಾಖ್ ನೀಡಬಹುದು ಎಂದು ಹೇಳಿದೆ.
ನವದೆಹಲಿ: ತ್ರಿವಳಿ ತಲಾಖ್ ಕುರಿತಂತೆ ಸುಪ್ರೀಂ ಕೋರ್ಟ್ ವಿಚಾರಣೆ ಪ್ರಾರಂಭಿಸಿದಾಗಿನಿಂದ ದಿನಕ್ಕೊಂದೊಂದು ಹೇಳಿಕೆ ನೀಡುತ್ತಿರುವ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಈಗ ಪುರುಷರಂತೆ ಮಹಿಳೆಯರೂ ಸಹ ತ್ರಿವಳಿ ತಲಾಖ್ ನೀಡಬಹುದು ಎಂದು ಹೇಳಿದೆ. 
ಮುಸ್ಲಿಮ್ ಸಮುದಾಯದಲ್ಲಿ ವಿವಾಹ ಎನ್ನುವುದು ಒಪ್ಪಂದವಾಗಿದ್ದು, ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ನಿಖಾನಾಮದಲ್ಲಿ ಒತ್ತಾಯ ಹೇರಬಹುದು ಹಾಗೂ ತ್ರಿವಳಿ ತಲಾಖ್ ನೀಡಬಹುದು ಎಂದು ಅಖಿಲ ಭಾರತೀಯು ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಸುಪ್ರೀಂ ಕೋರ್ಟ್ ಗೆ ಹೇಳಿದೆ. 
ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಮುಸ್ಲಿಮ್ ಮಹಿಳೆಯರಿಗೆ ಸ್ವಾತಂತ್ರ್ಯ ನೀಡಲಾಗಿದೆ. ನಿಖಾನಾಮದ ಪ್ರಕಾರ ಮಹಿಳೆಯರೂ ಸಹ ತಲಾಖ್ ನೀಡಬಹುದಾಗಿದೆ. ಅಷ್ಟೇ ಅಲ್ಲದೇ ಅತಿ ಹೆಚ್ಚು ಮೊತ್ತದ ಜೀವನಾಂಶವನ್ನು ಕೇಳಬಹುದಾಗಿದೆ ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೇಳಿದೆ. ಇದಕ್ಕೂ ಮುನ್ನ ತ್ರಿವಳಿ ತಲಾಖ್ ನ್ನು ನಂಬಿಕೆಯ ಪ್ರಶ್ನೆ ಎಂದಿದ್ದ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ, ಹಿಂದೂಗಳಿಗೆ ರಾಮಜನ್ಮಭೂಮಿ ಯಾವ ರೀತಿ ನಂಬಿಕೆಯ ಪ್ರಶ್ನೆಯೋ ಅದೇ ರೀತಿಯಲ್ಲಿ 1,400 ವರ್ಷಗಳ ಹಿಂದಿನ ತ್ರಿವಳಿ ತಲಾಖ್ ಪದ್ಧತಿಯೂ ಸಹ ನಂಬಿಕೆಯ ಪ್ರಶ್ನೆ ಎಂದು ವಾದಿಸಿತ್ತು. 

Related Stories

No stories found.

Advertisement

X
Kannada Prabha
www.kannadaprabha.com