ಭಾರತ ಮತ್ತು ಸಿಂಗಾಪುರ ನೌಕಾಪಡೆ ಮಧ್ಯೆ ಜಂಟಿ ನೌಕಾಭ್ಯಾಸ ಆರಂಭ

ಭಾರತೀಯ ನೌಕಾಪಡೆ ಮತ್ತು ರಿಪಬ್ಲಿಕ್ ಆಫ್ ಸಿಂಗಾಪುರ್ ನೌಕಾಪಡೆ ಮಧ್ಯೆ 24ನೇ ದ್ವಿಪಕ್ಷೀಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ನವದೆಹಲಿ: ಭಾರತೀಯ ನೌಕಾಪಡೆ ಮತ್ತು ರಿಪಬ್ಲಿಕ್ ಆಫ್ ಸಿಂಗಾಪುರ್ ನೌಕಾಪಡೆ ಮಧ್ಯೆ 24ನೇ ದ್ವಿಪಕ್ಷೀಯ ಕಡಲ ಅಭ್ಯಾಸ ಸಿಂಬೆಕ್ಸ್ -17 ಇಂದು ದಕ್ಷಿಣ ಚೀನಾ ಸಮುದ್ರದಲ್ಲಿ ಆರಂಭಗೊಂಡಿದ್ದು 7 ದಿನಗಳ ನಂತರ ಮೇ 24ರಂದು ಕೊನೆಗೊಳ್ಳಲಿದೆ.
ಈ ವರ್ಷದ ದ್ವಿಪಕ್ಷೀಯ ಕಡಲ ವ್ಯಾಯಾಮ, ಆರ್ಎಸ್ಎನ್ ಮತ್ತು ಐಎನ್ ಮಧ್ಯೆ ಹೆಚ್ಚುತ್ತಿರುವ ಪರಸ್ಪರ ಕಾರ್ಯಸಾಧ್ಯತೆ ಮತ್ತು ಕಡಲ ಭದ್ರತೆ ಕಾರ್ಯಾಚರಣೆಗಳಿಗಾಗಿ ಸಾಮಾನ್ಯ ತಿಳುವಳಿಕೆ ಮತ್ತು ಕಾರ್ಯವಿಧಾನಗಳನ್ನು ಹೆಚ್ಚಿಸಲು ಆಗಿದೆ. 
ಕಡಲ ಅಭ್ಯಾಸವನ್ನು ಎರಡು ಹಂತಗಳಾಗಿ ವಿಭಾಗಿಸಲಾಗಿದೆ. ಬಂದರು ಹಂತ ಇಂದಿನಿಂದ ಮೇ 20ರವರೆಗೆ ಮತ್ತು ಸಮುದ್ರ ಹಂತ ಮೇ 21ರಿಂದ ಮೇ 24ರವರೆಗೆ ನಡೆಯಲಿದೆ.
ಭಾರತೀಯ ನೌಕಾ ಹಡಗುಗಳಾದ ಶಿವಾಲಿಕ್, ಸಹ್ಯಾದ್ರಿ, ಜ್ಯೋತಿ ಮತ್ತು ಕಮೊರ್ತ, ಪಿ8-1 ಕಡಲ ಗಸ್ತು ಮತ್ತು ಜಲಾಂತರ್ಗಾಮಿ ವಿರೋಧಿ ಯುದ್ಧ ವಿಮಾನ ಕಡಲಾಭ್ಯಾಸದಲ್ಲಿ ಭಾಗವಹಿಸಲಿವೆ.
ಐಎನ್ಎಸ್ ಸಹ್ಯಾದ್ರಿ ಮತ್ತು ಐಎನ್ಎಸ್ ಕಮಾರ್ತ ಮೇ 12ಕ್ಕೆ ಆಗಮಿಸಿದ್ದರೆ, ಐಎನ್ಎಸ್ ಶಿವಾಲಿಕ್ ಮತ್ತು ಐಎನ್ಎಸ್ ಜ್ಯೋತಿ ಸಮುದ್ರ ಹಂತದಲ್ಲಿ ನೇರವಾಗಿ ಭಾಗವಹಿಸಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com