ತಿರುಪತಿ ದೇವಸ್ಥಾನದ 36 ಕಂಪ್ಯೂಟರ್‌ಗೆ ವಾನ್ನಕ್ರೈ ರಾನ್‌ಸಮ್‌ವೇರ್‌ ವೈರಸ್ ದಾಳಿ

ವಿಶ್ವದಾದ್ಯಂತ ಆತಂಕ ಸೃಷ್ಟಿಸಿರುವ ವಾನ್ನಾ ಕ್ರೈ ರಾನ್ಸಮ್ ವೇರ್ ಸೈಬರ್ ದಾಳಿಯ ಬಿಸಿ ತಿರುಮಲ ತಿರುಪತಿ ದೇವಾಲಯಕ್ಕೂ ತಟ್ಟಿದ್ದು, ತಿರುಪತಿ ದೇವಾಲಯದ...
ತಿರುಪತಿ ದೇವಾಲಯ
ತಿರುಪತಿ ದೇವಾಲಯ
ತಿರುಪತಿ: ವಿಶ್ವದಾದ್ಯಂತ ಆತಂಕ ಸೃಷ್ಟಿಸಿರುವ ವಾನ್ನಾ ಕ್ರೈ ರಾನ್ಸಮ್ ವೇರ್ ಸೈಬರ್ ದಾಳಿಯ ಬಿಸಿ ತಿರುಮಲ ತಿರುಪತಿ ದೇವಾಲಯಕ್ಕೂ ತಟ್ಟಿದ್ದು, ತಿರುಪತಿ ದೇವಾಲಯದ 36 ಕಂಪ್ಯೂಟರ್ ಗಳೂ ಹ್ಯಾಕ್ ಆಗಿದೆ ಎಂದು ಟಿಟಿಡಿ ಆಡಳಿತ ಮಂಡಳಿ ಹೇಳಿದೆ. 
ಟಿಟಿಡಿಯಲ್ಲಿ 2500 ಕಂಪ್ಯೂಟರ್ಗಳು ಕಾರ್ಯನಿರ್ವಹಿಸಿದ್ದು ಅವುಗಳ ಪೈಕಿ 36 ಕಂಪ್ಯೂಟರ್ ಗಳಿಗೆ ರಾನ್ಸಮ್ ವೇರ್ ವೈರಸ್ ಆಟಾಕ್ ಆಗಿದೆ ಎಂದು ಟಿಟಿಡಿ ಪಿಆರ್ಓ ತಲಾರಿ ರವಿ ಹೇಳಿದ್ದಾರೆ. 
ವೈರಸ್ ದಾಳಿಗೆ ತುತ್ತಾಗಿರುವ ಕಂಪ್ಯೂಟರ್ ಗಳು ಹಳೆಯ ವರ್ಷನ್ ಆಗಿದ್ದು ಇದೀಗ ಅವುಗಳನ್ನು ಅಪ್ ಡೇಟ್ ಮಾಡಲಾಗಿದೆ. ಇನ್ನು ವೈರಸ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ ಎಂದು ಹೇಳಿದ್ದಾರೆ. 
ಟಿಕೆಟ್ ಮಾರಾಟ ಹಾಗೂ ಭಕ್ತಾದಿಗಳಿಗೆ ಸಂಬಂಧಿಸಿದ ಸೇವೆ ಒದಗಿಸುವ ಕಂಪ್ಯೂಟರ್ ಗಳು ಮಾತ್ರ ಹ್ಯಾಕ್ ಆಗಿದ್ದು, ಇದರಿಂದ ಭಕ್ತರಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ನೆರವಿನೊಂದಿಗೆ ಸಮಸ್ಯೆಯನ್ನು ಸೇರಿ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ರವಿ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com