ಜಾಧವ್ ಕುರಿತು ಐಸಿಜೆ ಆದೇಶದ ಬಗ್ಗೆ ಹೆಚ್ಚು ಸಂತೋಷ ಬೇಡ: ಸರ್ಕಾರಕ್ಕೆ ಶಿವಸೇನೆ ಸಲಹೆ

ಭಾರತೀಯ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ರನ್ನು ಭಾರತಕ್ಕೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ:  ಭಾರತೀಯ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರುವವರೆಗೆ ಅಂತಾರಾಷ್ಟ್ರೀಯ ನ್ಯಾಯ ಕೋರ್ಟ್ ನೀಡಿದ ತೀರ್ಪಿಗೆ ಅತಿ ಸಂತೋಷ ಪಡುವುದು ಬೇಡ ಎಂದು ಶಿವಸೇನೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. 
ಆದರೆ ಕುಲಭೂಷಣ್  ವಿಚಾರದಲ್ಲಿ ವಿದೇಶಾಂಗ ಇಲಾಖೆ ಮಾಡಿದ ಪ್ರಯತ್ನವನ್ನು ಶಿವಸೇನೆ ಶ್ಲಾಘಿಸಿದೆ. ಹೇಗ್ ಅಂತಾರಾಷ್ಟ್ರೀಯ ನ್ಯಾಯ ಕೋರ್ಟ್ ನಲ್ಲಿ ಪಾಕಿಸ್ತಾನದ ವಾದಕ್ಕೆ ಅಪಜಯ ಸಿಕ್ಕಿದೆ. ಆದರೆ ಯುದ್ಧ ಇನ್ನೂ ಕೊನೆಗೊಂಡಿಲ್ಲ. ಲಾಹೊರ್ ಜೈಲಿನಲ್ಲಿ ಸರಬ್ಜಿತ್ ಸಿಂಗ್ ನ್ನು ಕೊಲೆ ಮಾಡಿದ ಪಾಕಿಸ್ತಾನದ ಕೆಲಸವನ್ನು ಮರೆಯಲು ಸಾಧ್ಯವಿಲ್ಲ. ಹೀಗಾಗಿ ಅಂತಾರಾಷ್ಟ್ರೀಯ ಕೋರ್ಟ್ ನ ಆದೇಶದಿಂದ ಅತ್ಯುತ್ಸಾಹ ಪಡುವುದು ಬೇಡ. ಕುಲಭೂಷಣ್ ಜಾಧವ್ ರನ್ನು ಭಾರತಕ್ಕೆ ಸುರಕ್ಷಿತವಾಗಿ ವಾಪಸ್ ತರುವವರೆಗೆ ಆತಂಕ ಕೊನೆಯಾಗುವುದಿಲ್ಲ  ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯ ಪುಟದಲ್ಲಿ ಬರೆದಿದೆ.
ಜಾಧವ್ ಕೇಸಿನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಯಭಾರಿ ನಡೆ ಆರಂಭದಿಂದಲೂ ಮುಖ್ಯವಾಗಿತ್ತು. ಜಾಧವ್ ರ ಜೀವವನ್ನು ಕಾಪಾಡಲು ಭಾರತ ಎಲ್ಲಾ ರೀತಿಯಿಂದಲೂ ಸಾಧ್ಯವಾದ ಪ್ರಯತ್ನ ಮಾಡಲಿದೆ ಎಂದು ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಆರಂಭದಿಂದಲೂ ಭರವಸೆ ನೀಡುತ್ತಲೇ ಬಂದಿದ್ದರು. ಅವರ ಭರವಸೆ ಆರಂಭದ ಹಂತದಲ್ಲಿಯೇ ನಿಜವಾಗಿದೆ. ಅವರಿಗೆ ಅಭಿನಂದನೆ ಸಲ್ಲಿಸಬೇಕು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com