ಬದ್ರಿನಾಥ್: ಭಾರಿ ಭೂ ಕುಸಿತ; ಅಪಾಯಕ್ಕೆ ಸಿಲುಕಿದ 14 ಸಾವಿರಕ್ಕೂ ಅಧಿಕ ಯಾತ್ರಿಗಳು!

ಪವಿತ್ರ ಕ್ಷೇತ್ರ ಬದ್ರಿನಾಥ್ ಹೆದ್ದಾರಿಯಲ್ಲಿ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದ ಪರಿಣಾಮ ಸುಮಾರು 14 ಸಾವಿರಕ್ಕೂ ಅಧಿಕ ಯಾತ್ರಾರ್ಥಿಗಳು ಅಪಾಯಕ್ಕೆ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.
ಬದ್ರಿನಾಥ್ ನಲ್ಲಿ ಭೂಕುಸಿತ
ಬದ್ರಿನಾಥ್ ನಲ್ಲಿ ಭೂಕುಸಿತ

ಡೆಹ್ರಾಡೂನ್: ಪವಿತ್ರ ಕ್ಷೇತ್ರ ಬದ್ರಿನಾಥ್ ಹೆದ್ದಾರಿಯಲ್ಲಿ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದ ಪರಿಣಾಮ ಸುಮಾರು 14 ಸಾವಿರಕ್ಕೂ ಅಧಿಕ ಯಾತ್ರಾರ್ಥಿಗಳು ಅಪಾಯಕ್ಕೆ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.

ಪ್ರಸಿದ್ಧ ಯಾತ್ರ ಸ್ಥಳ ಬದರೀನಾಥ್-ಚಾರ್'ದಾಮ್ ಯಾತ್ರಾ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ಚಮೋಲಿ ಜಿಲ್ಲೆಯ ವಿಷ್ಣು ಪ್ರಯಾಗದ ಹಾಥಿ ಪರ್ವತ್ ನಲ್ಲಿ ಉಂಟಾದ ಭಾರಿ ಪ್ರಮಾಣದ ಭೂಕುಸಿತದಿಂದ  ಸುಮಾರು 14  ಸಾವಿರ ಪ್ರವಾಸಿಗರು ಅಪಾಯದಲ್ಲಿ ಸಿಲುಕಿದ್ದಾರೆ. ಹೃಷಿಕೇಶ-ಬದ್ರಿನಾಥ ರಾಷ್ಟ್ರೀಯ ಹೆದ್ದಾರಿಯ 60 ಮೀಟರ್ ರಸ್ತೆ ಹಾಗೂ ಭೂಕುಸಿತವುಂಟಾದ ಸ್ಥಳದ 150 ಮೀಟರ್ ರಸ್ತೆ ಸಂಪೂರ್ಣ ಹಾಳಾಗಿದ್ದು, ಅದೃಷ್ಟವಶಾತ್ ಘಟನೆಯಲ್ಲಿ  ಯಾವೊಬ್ಬ ಯಾತ್ರಾರ್ಥಿಗೂ ಗಾಯಗಳಾಗಿಲ್ಲ.

ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ಹಾಗೂ ಗಡಿ ರಸ್ತೆಗಳ ನಿರ್ವಹಣಾ ಮಂಡಳಿ ಸಂಸ್ಥೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ರಸ್ತೆ ಮೇಲೆ ಬಿದ್ದಿರುವ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ  ಚಾಲನೆ ನೀಡಿದ್ದಾರೆ. ಬುಲ್ಡೋಜರ್ ಗಳು, ಬೃಹತ್ ಹಿಟಾಚಿಗಳ ಮೂಲಕ ಮಣ್ಣು ಮತ್ತು ಬೃಹತ್ ಬಂಡೆಗಳನ್ನು ತೆರವುಗೊಳಿಸಲಾಗುತ್ತಿದೆ. ಇನ್ನು ಸ್ಥಳೀಯ ಚಮೋಲಿಯ ಎಸ್ ಪಿ ತೃಪ್ತಿ ಭಟ್ ಅವರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು,  ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಸಾಧ್ಯವಾದಷ್ಟು ಬೇಗ ರಸ್ತೆಯನ್ನು ಸರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.

2015ರಲ್ಲಿ ಭಾರಿ ಮಳೆಯಿಂದ ಒರಿಸ್ಸಾದಲ್ಲಿ ಭೂಕುಸಿತವುಂಟಾಗಿ 300 ಮಂದಿ ಯಾತ್ರಾರ್ಥಿ'ಗಳು ಸಿಲುಕಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com