ಓಂ ಸ್ವಾಮಿ
ದೇಶ
ಮಾಜಿ ಬಿಗ್ ಬಾಸ್ ಸ್ಪರ್ಧಿ ಓಂ ಸ್ವಾಮಿಗೆ ಸಾರ್ವಜನಿಕರಿಂದ ಧರ್ಮದೇಟು!
ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿ ಕೊಡುವ ಹಿಂದಿಯ ಬಿಗ್ ಬಾಸ್ 10ರ ಸ್ಪರ್ಧಿಯಾಗಿದ್ದ ವಿವಾದಿತ ಓಂ ಸ್ವಾಮಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ...
ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿ ಕೊಡುವ ಹಿಂದಿಯ ಬಿಗ್ ಬಾಸ್ 10ರ ಸ್ಪರ್ಧಿಯಾಗಿದ್ದ ವಿವಾದಿತ ಓಂ ಸ್ವಾಮಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ.
ದೆಹಲಿಯ ವಿಕಾಸ್ ನಗರದಲ್ಲಿ ನಾಥುರಾಮ್ ಗೋಡ್ಸೆ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಓಂ ಸ್ವಾಮಿಯನ್ನು ಕರೆಸಲಾಗಿತ್ತು. ಇವರನ್ನು ಕಂಡ ಮಹಿಳೆಯ ಆತನನ್ನು ಕಾರ್ಯಕ್ರಮದಿಂದ ಹೊರಹಾಕುವಂತೆ ಕೂಗಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಭಾಷಣ ಮಾಡಲು ಬಂದ ಓಂ ಸ್ವಾಮಿಗೆ ಸಾರ್ವಜನಿಕರು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತನ್ನನ್ನು ಯಾಕೆ ಹೊಡೆಯುತ್ತಿದ್ದಾರೆ ಎಂಬುದು ಅರಿವಾಗದೆ ಓಂ ಸ್ವಾಮಿ ಕಕ್ಕಾಬಿಕ್ಕಿಯಾಗಿದ್ದು ಸ್ಥಳದಿಂದ ಕಾಲು ಕಿತ್ತಿದ್ದಾರೆ. ಇನ್ನು ಓಂ ಸ್ವಾಮಿ ಈ ಹಿಂದೆ ಟಿವಿ ಶೋವೊಂದರಲ್ಲಿ ಮಹಿಳೆಯೊಬ್ಬರೊಂದಿಗೆ ಕೈ ಕೈ ಮಿಲಾಯಿಸಿದ್ದರು.
ಇತ್ತೀಚೆಗಷ್ಟೇ ಯೋಗ ಕಲಿಸುವುದಾಗಿ ಯುವತಿಯನ್ನು ಕರೆಯಿಸಿ ಆಕೆಗೆ ಅರೆ ನಗ್ನ ಯೋಗ, ಧ್ಯಾನ ಎಂದೆಲ್ಲ ವಿಡಿಯೋ ಮಾಡಿ ಇಂಟರ್ ನೆಟ್ ಗೆ ಬಿಟ್ಟಿದ್ದರು. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ