ಅಲ್ಮೋರಾ(ಉತ್ತರಖಂಡ್): ಖಾಸಗಿ ಬಸ್ ಮೇಲೆ ದೊಡ್ಡ ಬಂಡೆಯೊಂದು ಉರುಳಿಬಿದ್ದ ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ಅಲ್ಮೋರಾದ ಕಕ್ಕ್ರಿಘಾಟ್ ಬಳಿ ಸಂಭವಿಸಿದೆ.
ಉತ್ತರಖಂಡದಲ್ಲಿ ಭಾರೀ ಭೂಕುಸಿತ ಸಂಭವಿಸುತ್ತಿದ್ದು 14 ಸಾವಿರ ಯಾತ್ರಾತ್ರಿಗಳನ್ನು ಸ್ಥಳಾಂತರಿಸಲಾಗುತ್ತಿದೆ. ಈ ಮಧ್ಯೆ ಬಂಡೆಯೊಂದು ಬಸ್ ಮೇಲೆ ಉರುಳಿ ಬಿದಿದ್ದು ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು ಆರು ಜನರಿಗೆ ಗಂಭೀರ ಗಾಯಗಳಾಗಿವೆ.
ಅಪಘಾತ ಸ್ಥಳಕ್ಕೆ ಬಂದ ಪೊಲೀಸರು ಕೂಡಲೇ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.