ಲಾಲು ಪುತ್ರಿ ಮಿಸಾ ಭಾರತಿಯ ಸಿಎಯನ್ನು ಬಂಧಿಸಿದ ಜಾರಿ ನಿರ್ದೇಶನಾಲಯ

ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಲಾಲು ಪ್ರಸಾದ್ ಯಾದವ್ ಪುತ್ರಿ ಮಿಸಾ ಭಾರತಿ ಅವರ ಸಿಎ(ಲೆಕ್ಕ ಪರಿಶೋಧಕ) ರಾಜೇಶ್ ಅಗರ್ವಾಲ್ ಅವರನ್ನು ಬಂಧಿಸಿದ್ದಾರೆ.
ಮಿಸಾ ಭಾರತಿ
ಮಿಸಾ ಭಾರತಿ
ನವದೆಹಲಿ: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಲಾಲು ಪ್ರಸಾದ್ ಯಾದವ್ ಪುತ್ರಿ ಮಿಸಾ ಭಾರತಿ ಅವರ ಸಿಎ(ಲೆಕ್ಕ ಪರಿಶೋಧಕ) ರಾಜೇಶ್ ಅಗರ್ವಾಲ್ ಅವರನ್ನು ಬಂಧಿಸಿದ್ದಾರೆ. 
ಕಪ್ಪು ಹಣವನ್ನು ಸಕ್ರಮವಾಗಿಸುವ ದಂಧೆಯಲ್ಲಿ ರಾಜೇಶ್ ಅಗರ್ವಾಲ್ ಅವರು ಶಾಮೀಲಾಗಿದ್ದಿದ್ದರಿಂದ ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಕಪ್ಪುಹಣವನ್ನು ಸಕ್ರಮ ಮಾಡಿಕೊಳ್ಳಲು ಯತ್ನಿಸಿದ್ದ ರಾಜೇಶ್ ಅವರ್ಗಾಲ್ ಹಾಗೂ ಎಸ್.ಕೆ ಜೈನ್ ಹಾಗೂ ವಿಕೆ ಜೈನ್ ಸಹೋದರರು ನಡೆಸಿದ್ದ ಹಣದ ವಹಿವಾಟುಗಳು ಅನುಮಾನಾಸ್ಪದವಾಗಿದ್ದರು. ಈ ಹಿನ್ನೆಲೆಯಲ್ಲಿ ಮಾ.20 ರಂದು ಜೈನ್ ಸಹೋದರರನ್ನು ಬಂಧಿಸಲಾಗಿತ್ತು. 
ಕೇವಲ ಹಣವರ್ಗಾವಣೆ ಮಾಡುವುದಕ್ಕಾಗಿಯೇ ಹೆಸರಿಗಷ್ಟೇ ಇರುವ 90 ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ ಕಣ್ಣಿಟ್ಟಿದ್ದು, ರಾಜೇಶ್ ಅಗರ್ವಾಲ್ ವಿರುದ್ಧ ಮಿಸಾ ಭಾರತಿ ಪತಿಯ ಕಂಪನಿಗೂ ಸಹಾಯ ಮಾಡಿರುವ ಆರೋಪ ಕೇಳಿಬಂದಿದೆ. ಲಾಲು ಪ್ರಸಾದ್ ಯಾದವ್ ಬೇನಾಮೆ ಆಸ್ತಿಗೆ ಸಂಬಂಧಿಸಿದಂತೆ ಮೇ.16 ರಂದು ಐಟಿ ನವದೆಹಲಿಯ 22 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಈ ಪ್ರಕರಣದ ಭಾಗವಾಗಿಯೇ ಈಗ ಮಿಸಾ ಭಾರತಿ ಸಿಎಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com