
ನವದೆಹಲಿ: 90ರ ದಶಕದ ರಾಜಕೀಯ ಪರಿಸ್ಥಿತಿಯಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ವಿವಾದಿತ ದೇವಮಾನವ ಚಂದ್ರಸ್ವಾಮಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಜ್ಯೋತಿಷ್ಯದ ಮೂಲಕ ಅ ಪ್ರಸಿದ್ಧರಾಗಿದ್ದ ವಿವಾದಿತ ದೇವಮಾನವ ಚಂದ್ರಸ್ವಾಮಿ (66 ವರ್ಷ)ದೆಹಲಿಯ ಆಪೋಲೋ ಆಸ್ಪತ್ರೆಯಲ್ಲಿ ಅಸು ನೀಗಿದ್ದು, ಅವರ ಅಂತ್ಯಕ್ರಿಯೆ ಇಂದು ನೆರವೇರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಪಾಶ್ರ್ವವಾಯು ಪೀಡಿತರಾಗಿದ್ದ ಚಂದ್ರಸ್ವಾಮಿ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಚಂದ್ರಸ್ವಾಮಿ, ಅನಾರೋಗ್ಯದಿಂದ ಮಂಗಳವಾರ ಮಧ್ಯಾಹ್ನ 2.56ಕ್ಕೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರಿಗೆ ಆಪ್ತರೆನಿಸಿದ್ದ ಚಂದ್ರಸ್ವಾಮಿ, ರಾವ್ ಆಡಳಿತಾವಧಿಯಲ್ಲಿ ಸಾಕಷ್ಟುಪ್ರಾಮುಖ್ಯತೆಯನ್ನು ಪಡೆದಿದ್ದರು. 90ರ ದಶಕದಲ್ಲಿ 5 ವರ್ಷಗಳ ಇವರೇ ಅಧಿಕಾರ ಕೇಂದ್ರ ಎನ್ನಿಸಿಕೊಂಡಿದ್ದರು. ದೇಶ-ವಿದೇಶಗಳ ಅನೇಕ ದೊರೆಗಳು, ಹೊರದೇಶಗಳ ಮುಖ್ಯಸ್ಥರು, ನಟ-ನಟಿಯರು, ಭೂಗತ ಪಾತಕಿಗಳ ‘ಧಾರ್ಮಿಕ ಸಲಹೆಗಾರ' ಎನ್ನಿಸಿಕೊಂಡಿದ್ದರು. ಆದರೆ ವಿವಾದಕ್ಕೀಡಾದ ಬಳಿಕ ಏಕಾಂಗಿಯಾಗಿದ್ದರು. ಅಲ್ಲದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣದಲ್ಲೂ ಚಂದ್ರಸ್ವಾಮಿ ಅವರ ಹೆಸರು ತಳುಕು ಹಾಕಿಕೊಂಡಿತ್ತು. ರಾಜೀವ್ ಹತ್ಯೆಗೆ ಚಂದ್ರಸ್ವಾಮಿ ಆರ್ಥಿಕ ನೆರವು ನೀಡಿದ್ದರು ಎಂಬ ಗಂಭೀರ ಆರೋಪ ಕೂಡ ಕೇಳಿಬಂದಿತ್ತು.
Advertisement