ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಅಡ್ವಾಣಿ, ಇತರರ ವಿರುದ್ಧ ಆರೋಪ ಪಟ್ಟಿ ಸಿದ್ಧಪಡಿಸಲಿರುವ ಸಿಬಿಐ ಕೋರ್ಟ್

1992 ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐ ನ ವಿಶೇಷ ನ್ಯಾಯಾಲಯ ಮೇ.25 ರಂದು ಪ್ರಕರಣದ ಆರೋಪಿಗಳಾದ ಅಡ್ವಾಣಿ ಹಾಗೂ ಇತರರ ವಿರುದ್ಧ ಹೆಚ್ಚುವರಿ ಆರೋಪ ಪಟ್ಟಿ..
ಎಲ್ ಕೆ ಅಡ್ವಾಣಿ
ಎಲ್ ಕೆ ಅಡ್ವಾಣಿ
Updated on
ಲಖನೌ: 1992 ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐ ನ ವಿಶೇಷ ನ್ಯಾಯಾಲಯ ಮೇ.25 ರಂದು ಪ್ರಕರಣದ ಆರೋಪಿಗಳಾದ ಅಡ್ವಾಣಿ ಹಾಗೂ ಇತರರ ವಿರುದ್ಧ ಹೆಚ್ಚುವರಿ ಆರೋಪ ಪಟ್ಟಿ ಸಿದ್ಧಪಡಿಸಲಿದೆ. 
ಮಾಜಿ ಗೃಹ ಸಚಿವ, ಉಪಪ್ರಧಾನಿ ಎಲ್ ಕೆ ಅಡ್ವಾಣಿ ಹಾಗೂ ಇನ್ನಿತರ ನಾಯಕರ ವಿರುದ್ಧದ ಕ್ರಿಮಿನಲ್ ಸಂಚು ಆರೋಪವನ್ನು ಕೈಬಿಡಲು ನಿರಾಕರಿಸಿದ್ದ ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆ ನಡೆಸುವಂತೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಆದೇಶ ನೀಡಿತ್ತು. 
ಮೇ.24 ರಂದು ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ನ ವಿಶೇಷ ನ್ಯಾಯಾಲಯ ಆರೋಪಿಗಳಾದ ಶಿವಸೇನೆಯ ಸಂಸದ ಸತೀಶ್ ಪ್ರಧಾನ್ ಗೆ ಜಾಮೀನು ನೀಡಿದೆ. ಮೇ.23 ರಂದೇ ಪ್ರಕರಣದ ವಿಚಾರಣೆ ನಡೆಯಬೇಕಿತ್ತಾದರೂ ಪ್ರಕರಣದ ಓರ್ವ ಆರೋಪಿ ಸತೀಶ್ ಪ್ರಧಾನ್ ಕೋರ್ಟ್ ಗೆ ಹಾಜರಾಗದೇ ಇದ್ದ ಕಾರಣ ಕೋರ್ಟ್ ಮುಂದಿನ ವಿಚಾರಣೆಯನ್ನು ಮೇ.24 ಕ್ಕೆ ನಿಗದಿಪಡಿಸಿತ್ತು. ಮರುದಿನದ ವಿಚಾರಣೆಯಲ್ಲಿ ಆರೋಪಿ ಹಾಜರಾಗಿ ಶರಣಾದ ಕಾರಣ ಗೆ ಜಾಮೀನು ಮಂಜೂರು ಮಾಡಲಾಗಿದೆ. 
ಮೇ.20 ರಂದು ವಿಚಾರಣೆಯನ್ನು ಪ್ರಾರಂಭಿಸಿದ್ದ ವಿಶೇಷ ನ್ಯಾಯಾಲಯ ಪ್ರಕರಣದಲ್ಲಿ ಆರೋಪಿಗಳಾಗಿರುವ 5 ವಿಹೆಚ್ ಪಿ ನಾಯಕರಿಗೆ ಈಗಾಗಲೇ ಜಾಮೀನು ಮಂಜೂರು ಮಾಡಿದೆ. ಇದೀಗ ಎಲ್ ಕೆ ಅಡ್ವಾಣಿ ಸೇರಿದಂತೆ ಇತರ ಪ್ರಮುಖ ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಿದ್ಧಪಡಿಸಲಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com