ಮಹಿಳೆಯರು ಸಿಕ್ಕರೆ ಸೇನಾ ಯೋಧರು ಅತ್ಯಾಚಾರ ಮಾಡುತ್ತಾರೆ: ಬಾಲಕೃಷ್ಣನ್ ವಿವಾದಾತ್ಮಕ ಹೇಳಿಕೆ

ಭಾರತೀಯ ಸೇನೆ ಮಹಿಳೆಯರನ್ನು ಅಪಹರಿಸಿ ಅವರ ಮೇಲೆ ಅತ್ಯಾಚಾರವೆಸಗಬಹುದು ಆದರೆ, ಅವರನ್ನು ಯಾರೂ ಪ್ರಶ್ನೆ ಮಾಡುವುದಿಲ್ಲ ಎಂದು ಸಿಪಿಎಂನ ಕೇರಳ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್...
ಸಿಪಿಎಂನ ಕೇರಳ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್
ಸಿಪಿಎಂನ ಕೇರಳ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್
ಕಣ್ಣೂರು: ಭಾರತೀಯ ಸೇನೆ ಮಹಿಳೆಯರನ್ನು ಅಪಹರಿಸಿ ಅವರ ಮೇಲೆ ಅತ್ಯಾಚಾರವೆಸಗಬಹುದು ಆದರೆ, ಅವರನ್ನು ಯಾರೂ ಪ್ರಶ್ನೆ ಮಾಡುವುದಿಲ್ಲ ಎಂದು ಸಿಪಿಎಂನ ಕೇರಳ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. 
ಪಾಕಿಸ್ತಾನದಿಂದ ಎದುರಾಗುತ್ತಿರುವ ಯುದ್ಧದ ಸನ್ನಿವೇಶ ಎದುರಿಸಲು ಕಾಶ್ಮೀರದಲ್ಲಿ ಸೇನೆಗೆ ಮುಕ್ತ ಅಧಿಕಾರ ನೀಡಲಾಗಿದೆ ಎಂಬ ರಕ್ಷಣಾ ಸಚಿವ ಅರುಣ್ ಜೇಟ್ಲಿಯವರು ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಾಲಕೃಷ್ಣನ್ ಅವರು, ಸೇನೆ ಯಾರ ಮೇಲೆ ಏನು ಬೇಕಾದರೂ ಮಾಡಬಹುದು. ನಾಲ್ಕಕ್ಕಿಂತ ಹೆಚ್ಚು ಜನರು ಒಟ್ಟಿಗೇ ನಿಂತಿರುವುದನ್ನು ನೋಡಿದರೆ ಸೇನೆ ಅವರ ಮೇಲೆ ಗುಂಡು ಹಾರಿಸಬಹುದು. ಅವರು ಯಾವುದೇ ಮಹಿಳೆಯರನ್ನು ಬೇಕಾದರೂ ಅಪಹರಿಸಿ ಅವರ ಮೇಲೆ ಅತ್ಯಾಚಾರವೆಸಗಬಹುದು. ಯಾರು ಅವರನ್ನು ಪ್ರಶ್ನಿಸುವ ಅಧಿಕಾರ ಹೊಂದಿರುವುದಿಲ್ಲ ಎಂದು ಹೇಳಿದ್ದಾರೆ. 
ಸೇನೆ ಎಲ್ಲೆಲ್ಲಿ ಇದೆಯೋ ಅಲ್ಲೆಲ್ಲಾ ಈ ರೀತಿಯ ಸ್ಥಿತಿ ಇದೆ. ಕಣ್ಣೂರಿನಲ್ಲಿ ಸೇನೆಪಡೆಯನ್ನು ನಿಯೋಜಿಸಿದ್ದೇ ಆದರೆ, ಸೇನೆ ಹಾಗೂ ಜನರ ಮಧ್ಯೆಯೇ ಘರ್ಷಣೆ ಏರ್ಪಡಲಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com