ಎನ್ ಜಿಟಿ ಸಮಿತಿಯಿಂದ ಸಾಕ್ಷ್ಯಾಧಾರ ರಹಿತ ವರದಿ ತಯಾರಿಕೆ: ಆರ್ಟ್ ಅಫ್ ಲಿವಿಂಗ್ ಗಂಭೀರ ಆರೋಪ

ವಿಶ್ವ ಸಾಂಸ್ಕೃತಿಕ ಉತ್ಸವಕ್ಕಾಗಿ ಯಮುನಾ ನದಿ ತೀರದ ಜೈವಿಕ ಪರಿಸರ ನಾಶ ಮಾಡಿದ ಗಂಭೀರ ಆರೋಪ ಎದುರಿಸುತ್ತಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಇದೀಗ ಪ್ರಕರಣ ಸಂಬಂಧ ಹಸಿರು ನ್ಯಾಯಯಾಧಿಕರಣದ ಸಮಿತಿ ನೀಡಿರು ವರದಿ ವಿರುದ್ಧ ಕಿಡಿಕಾರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ವಿಶ್ವ ಸಾಂಸ್ಕೃತಿಕ ಉತ್ಸವಕ್ಕಾಗಿ ಯಮುನಾ ನದಿ ತೀರದ ಜೈವಿಕ ಪರಿಸರ ನಾಶ ಮಾಡಿದ ಗಂಭೀರ ಆರೋಪ ಎದುರಿಸುತ್ತಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಇದೀಗ ಪ್ರಕರಣ ಸಂಬಂಧ ಹಸಿರು  ನ್ಯಾಯಯಾಧಿಕರಣದ ಸಮಿತಿ ನೀಡಿರು ವರದಿ ವಿರುದ್ಧ ಕಿಡಿಕಾರಿದೆ.

ಹಸಿರು ನ್ಯಾಯಾಧಿಕರಣದ ತಜ್ಞರ ಸಮಿತಿಯ ವರದಿ ಲೋಪದಿಂದ ಕೂಡಿದ್ದು, ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆಯೇ ವರದಿ ತಯಾರಿಸಲಾಗಿದೆ ಎಂದು ಆರ್ಟ್ ಆಫ್ ಲಿವಿಂಗ್ ಹೇಳಿದೆ. ತಜ್ಞರ ಸಮಿತಿ ನೀಡಿರುವ ವರದಿಯಲ್ಲಿ ವಿಶ್ವ  ಸಾಂಸ್ಕೃತಿಕ ಉತ್ಸವದಿಂದಾಗಿ ಯಮುನಾ ನದಿ ತೀರದ ಜೈವಿಕ ಪರಿಸರ ನಾಶವಾಗಿದೆ ಎನ್ನುವುದಕ್ಕೆ ಯಾವುದೇ ಪ್ರಬಲ ಸಾಕ್ಷಿಗಳಿಲ್ಲ ಎಂದು ಸಂಸ್ಥೆ ವಾದಿಸಿದೆ. ಅಲ್ಲದೆ ಈ ಹಿಂದೆ ಹಸಿರು ನ್ಯಾಯಾಧಿಕರಣ ನೀಡಿದ್ದ ತೀರ್ಪನ್ನೇ  ತನ್ನ ವರದಿಯಾಗಿ ನೀಡಿದೆ ಎಂದೂ ಆರೋಪಿಸಿದೆ.

ಇದೀಗ ಪ್ರಕರಣದ ವಿಚಾರಣೆಯನ್ನು ಹಸಿರು ನ್ಯಾಯಾಧಿಕರಣ ಜುಲೈ 12ರವರೆಗೂ ಮುಂದೂಡಿದ್ದು, ಜುಲೈ 13ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

ಈ ಹಿಂದಿನ ವಿಚಾರಣೆಯಲ್ಲಿ ನ್ಯಾಯಾಧಿಕರಣ ಡಿಡಿಎ (ದೆಹಲಿ ಅಭಿವೃದ್ಧಿ ಪ್ರಾಧಿಕಾರ)ವನ್ನು ಜವಾಬ್ದಾರಿಯಾಗಿ ಮಾಡಿತ್ತು. ಅಲ್ಲದೆ ಸ್ಥಳೀಯವಾಗಿ ಅಂದರೆ ಡಿಡಿಎ ವ್ಯಾಪ್ತಿಯಲ್ಲಿ ಬರುವ ಯಮುನಾ ನದಿ ತೀರದಲ್ಲಿ ಯಾವುದೇ  ರೀತಿಯ ಜೈವಿಕ ಪರಿಸರಕ್ಕೆ ಹಾನಿಯಾದರೆ ಅದಕ್ಕೆ ಡಿಡಿಎ ನೇರ ಹೊಣೆಯಾಗುತ್ತದೆ ಎಂದೂ ಹೇಳಿತ್ತು. ಅಂತೆಯೇ ಘಟನಾ ಸ್ಥಳದಲ್ಲಿ ಮತ್ತೆ ಜೈವಿಕ ಪರಿಸರ ಸಹಜ ಸ್ಥಿತಿಗೆ ಮರಳು ಎಷ್ಟು ಸಮಯ ಬೇಕಾಗುತ್ತದೆ ಎಂದೂ ಡಿಡಿಎ  ಯನ್ನು ಕೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com