
ರಾಯ್‌ಪುರ: ಇತ್ತೀಚೆಗೆ ಮಾವೋವಾದಿಗಳ ಗುಂಡಿಗೆ ಬಲಿಯಾದ 12 ಮಂದಿ ಬಿಎಸ್ ಎಫ್ ಯೋಧರ ಕುಟುಂಬಗಳಿಗೆ ಧನ ಸಹಾಯ ಮಾಡಿದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರಿಗೆ ಮಾವೋವಾದಿಗಳು ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
ಅಕ್ಷಯ್ ಕುಮಾರ್ ಮತ್ತು ಸೈನಾ ನೆಹ್ವಾಲ್ ಅವರ ಕ್ರಮವನ್ನು ಮಾವೋವಾದಿಗಳು ಟೀಕಿಸಿದ್ದು, ಬಡವರ ಲೂಟಿ ಮಾಡುವ ಯೋಧರ ಬದಲು ನಮ್ಮ ಕ್ರಾಂತಿಕಾರಿ ಹೋರಾಟ ಬೆಂಬಲಿಸಿ ಮತ್ತು ಗೋರಕ್ಷಣೆಯ ಹೆಸರಲ್ಲಿ ಗೋರಕ್ಷಕರು ದಲಿತರು ಹಾಗೂ ಮುಸ್ಲಿಮರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ನಕ್ಸಲ್ ಪೀಡಿತ ಛತ್ತೀಸ್ ಘಡದ ರಾಯ್ ಪುರ ಮತ್ತು ಬಸ್ತಾರ್ ನಲ್ಲಿ ಕರಪತ್ರ ಹಂಚಲಾಗಿದೆ ಎಂದು ತಿಳಿದುಬಂದಿದೆ.
ಅಂತೆಯೇ ದಲಿತರ ವಿರುದ್ಧದ ದಾಳಿ ಮಾನಹ ಹಕ್ಕುಗಳ ಉಲ್ಲಂಘನೆಯಾಗಿದ್ದು, ಈ ಬಗ್ಗೆ ಧ್ವನಿ ಎತ್ತುವಂತೆ ಸಲಹೆ ನೀಡಿದ್ದಾರೆ. ಛತ್ತೀಸ್ ಘಡದ ಸುಕ್ಮಾ ಜಿಲ್ಲೆಯಲ್ಲಿ ಸುಮಾರು 300 ಮಂದಜಿ ನಕ್ಸಲರು ಏಕಕಾಲದಲ್ಲಿ ದಾಳಿ ಮಾಡಿದ್ದರು. ಊಟ ಮಾಡುತ್ತಿದ್ದ ಯೋಧರ ಮೇಲೆ ಏಕಾಏಕಿ ಗುಂಡಿನ ಮಳೆಗರೆದ ಪರಿಣಾಮ ಘಟನೆಯಲ್ಲಿ 12 ಮಂದಿ ಯೋಧರು ಹುತಾತ್ಮರಾಗಿದ್ದರು.
ಈ ಹುತಾತ್ಮ ಯೋಧರ ಕುಟುಂಬಗಳಿಗೆ ನಟ ಅಕ್ಷಯ್ ಕುಮಾರ್ ಹಾಗೂ ಸೈನಾ ನೆಹ್ವಾಲ್ ಅವರು ಆರ್ಥಿಕ ನೆರವು ನೀಡಿದ್ದರು.
Advertisement