ಚೀನಾ ವಿರುದ್ಧ ಯುದ್ಧದ ವೇಳೆ ಭೂಮಿ ಕಳೆದುಕೊಂಡ ಅರುಣಾಚಲ ಜನತೆಗೆ ಪರಿಹಾರ!

ಸುಮಾರು 55 ವರ್ಷಗಳ ನಂತರ 1962ರಲ್ಲಿ ಚೀನಾ ವಿರುದ್ಧ ನಡೆದ ಯುದ್ಧದ ವೇಳೆ ಭೂಮಿ ಕಳೆದುಕೊಂಡಿದ್ದ ಸಾವಿರಾರು ಅರುಣಾಚಲ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಸುಮಾರು 55 ವರ್ಷಗಳ ನಂತರ 1962ರಲ್ಲಿ ಚೀನಾ ವಿರುದ್ಧ ನಡೆದ ಯುದ್ಧದ ವೇಳೆ ಭೂಮಿ ಕಳೆದುಕೊಂಡಿದ್ದ ಸಾವಿರಾರು ಅರುಣಾಚಲ ಪ್ರದೇಶ ನಿವಾಸಿಗಳಿಗೆ ಈಗ ಅನಿರೀಕ್ಷಿತವಾಗಿ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ.
ಯುದ್ಧದ ವೇಳೆ ಸೇನೆ ಸ್ವಾಧೀನಪಡಿಸಿಕೊಂಡಿದ್ದ ಭೂಮಿ ಪರಿಹಾರ ನೀಡುವುದಕ್ಕಾಗಿ ಕೇಂದ್ರ ಮತ್ತು ಅರುಣಾಚಲ ಪ್ರದೇಶ ಸಿದ್ಧತೆ ನಡೆಸುತ್ತಿದ್ದು, ಪರಿಹಾರದ ಮೊತ್ತ ಸುಮಾರು 3 ಸಾವಿರ ಕೋಟಿ ರುಪಾಯಿ ಆಗುವ ಸಾಧ್ಯತೆ ಇದೆ.
ನಿನ್ನೆ ದೆಹಲಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ರಕ್ಷಣಾ ಖಾತೆ ರಾಜ್ಯ ಸಚಿವ ಸುಭಾಶ್ ಭಮ್ರೆ, ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಹಾಗೂ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ಮತ್ತು ಹಿರಿಯ ಅಧಿಕಾರಿಗಳು ಭೂಮಿ ಕಳೆದುಕೊಂಡ ಜನರಿಗೆ ಪರಿಹಾರ ನೀಡುವ ಬಗ್ಗೆ ಚರ್ಚಿಸಿದ್ದಾರೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಿರಣ್ ರಿಜಿಜು ಅವರು, ರಕ್ಷಣಾ ಸಂಸ್ಥೆಗಳಿಗಾಗಿ ಅರುಣಾಚಲ ಪ್ರದೇಶದ ವಿವಿಧ ಪ್ರದೇಶಗಳಲ್ಲಿ ಸೇನೆ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ನೀಡುವ ಕುರಿತು ಚರ್ಚಿಸಲಾಯಿತು ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com