ಕಳೆದ ವರ್ಷ ಚೆನ್ನೈ ರೈಲ್ವೇ ನಿಲ್ದಾಣದಲ್ಲಿ ಟೆಕ್ಕಿ ಸ್ವಾತಿಯವರನ್ನು ಹತ್ಯೆ ಮಾಡಲಾಗಿತ್ತು. ಪ್ರಕರಣ ದೇಶದಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಸ್ವಾತಿ ಕೊಲೆ ಪ್ರಕರಣದ ಕಥೆಯಾಧರಿಸಿ ಜಯ ಶುಭಾಶ್ರೀ ಬ್ಯಾನರ್ ನಲ್ಲಿ 'ಸ್ವಾತಿ ಕೊಲೈ ವಝಾಕು' ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ಇನ್ಸ್ ಪೆಕ್ಟರ್ 'ಶಕ್ತಿ' ಪಾತ್ರದಲ್ಲಿ 'ಅಜ್ಮಲ್' ನಟಿಸಲಿದ್ದಾರೆ. ಆಯಿರಾ 'ಸ್ವಾತಿ' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಡಿಬೂಟಂಟ್ ಮನೋ ಆರೋಪಿಯ ಪಾತ್ರ ನಿರ್ವಹಿಸಲಿದ್ದಾರೆ. ಚಿತ್ರದ ಟ್ರೈಲರ್ ಎರಡು ದಿನಗಳ ಹಿಂದಷ್ಟೇ ಬಿಡುಗಡೆ ಮಾಡಲಾಗಿದೆ.