ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಆಗ್ರಾ: ಮಗಳ ಶಾಲೆ ಫೀಸ್ ಕಟ್ಟಲು ತನ್ನ ಕಿಡ್ನಿಯನ್ನೆ ಮಾರಾಟಕ್ಕಿಟ್ಟ ತಾಯಿ

ಮಗಳ ಶಾಲೆಯ ಶುಲ್ಕ ಕಟ್ಟಲು ಅಸಹಾಯಕಳಾದ ತಾಯಿಯೋರ್ವಳು ತನ್ನ ಕಿಡ್ನಿಯನ್ನೆ ಮಾರಾಟಕ್ಕಿಟ್ಟಿರುವ ದಾರುಣ ಘಟನೆ ...
ಆಗ್ರಾ: ಮಗಳ ಶಾಲೆಯ ಶುಲ್ಕ ಕಟ್ಟಲು ಅಸಹಾಯಕಳಾದ ತಾಯಿಯೋರ್ವಳು ತನ್ನ ಕಿಡ್ನಿಯನ್ನೆ ಮಾರಾಟಕ್ಕಿಟ್ಟಿರುವ ದಾರುಣ ಘಟನೆ ಆಗ್ರಾದಲ್ಲಿ ನಡೆದಿದೆ. 
ಉತ್ತರ ಪ್ರದೇಶ ರೋಹ್ತಾ ಪ್ರದೇಶ ಆರ್ತಿ ಶರ್ಮಾ ಅನರ ಮಗಳನ್ನು ಹಣ ಕಟ್ಟದಿದ್ದಕ್ಕಾಗಿ ಶಾಲೆಯಿಂದ ಹೊರಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ತನ್ನ ಕಿಡ್ನಿಯನ್ನು ಮಾರಾಟಕ್ಕಿಟ್ಟಿರುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾಳೆ. 
ಸಂಘಟನೆಗಳ ಸಹಾಯ ಪಡೆದಿರುವ ಆರತಿ ದೇಶದಲ್ಲಿರುವ ಯಾರಿಗೆ ಕಿಡ್ನಿ ಅವಶ್ಯಕತೆಯಿದೆಯೋ ಅಂಥವರು ಸಂಪರ್ಕಿಸಬೇಕೆಂದು ಮನವಿ ಮಾಡಿದ್ದಾರೆ.ಆರತಿ ಪತಿ ರೆಡಿಮೇಡ್ ಬಟ್ಟೆ ವ್ಯಾಪಾರಿ, ಆದರೆ ನೋಟು ನಿಷೇಧದ ನಂತರ ವ್ಯಾಪಾರಕ್ಕೆ ನಷ್ಟಉಂಟಾಗಿದೆ. ಹೀಗಾಗಿ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಶಾಲೆಯ ಫೀಸು ಕಟ್ಟಲು ಸಾಧ್ಯವಾಗಿರಲಿಲ್ಲ. 
ಆರತಿ ಶರ್ಮಾ ಸ್ಥಳೀಯರ ಬಳಿ ಸಹಾಯ ಕೋರಿದ್ದಾರೆ. ಆದರೆ ಯಾರೋಬ್ಬರು ಆಕೆಗೆ ಸಹಾಯ ಮಾಡದೇ ನಿಂದಿಸಿದ್ದಾರೆ. 
ತಮ್ಮ ಯೋಗ್ಯತೆಗೆ ತಕ್ಕಂತೆ ಮಕ್ಕಳ ವಿದ್ಯಾಭ್ಯಾಸ ನಡೆಸಬೇಕು ಎಂದು ಟೀಕಿಸಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿನಿಯಾದ ಬಾಲಕಿ ಐಎಎಸ್ ಅಧಿಕಾರಿಯಾಗಬೇಕೆಂಬ ಆಸೆ ಹೊತ್ತಿದ್ದಾಳೆ.

Related Stories

No stories found.

Advertisement

X
Kannada Prabha
www.kannadaprabha.com