ಎಟಿಎಂ, ಆನ್ಲೈನ್ ವಹಿವಾಟುಗಳ ಶುಲ್ಕ ಪರಿಷ್ಕರಿಸಿದ ಎಸ್ ಬಿಐ: ನೀವು ತಿಳಿಯಬೇಕಾದ ಅಂಶಗಳು

ಮೊಬೈಲ್ ವಾಲೆಟ್ ನಿಂದ ಹಣ ತೆಗೆಯುವುದು ಸೇರಿದಂತೆ ವಿವಿಧ ಸೇವೆಗಳಿಗೆ ಸೇವಾ ಶುಲ್ಕ ಬದಲಾವಣೆಯಾಗಲಿದೆ.
ಎಸ್ ಬಿಐ
ಎಸ್ ಬಿಐ
ನವದೆಹಲಿ: ಜೂ.1 ರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ಯಾಷ್, ಎಟಿಎಂ, ಆನ್ ಲೈನ್ ಟ್ರಾನ್ಸಾಕ್ಷನ್ ಶುಲ್ಕ ಪರಿಷ್ಕರಣೆ ಮಾಡಿದ್ದು, ಮೊಬೈಲ್ ವಾಲೆಟ್ ನಿಂದ ಹಣ ತೆಗೆಯುವುದು ಸೇರಿದಂತೆ ವಿವಿಧ ಸೇವೆಗಳಿಗೆ ಸೇವಾ ಶುಲ್ಕ ಬದಲಾವಣೆಯಾಗಲಿದೆ. 
ಮೊಬೌಲ್ ವಾಲೆಟ್ ಆಪ್ ಮೂಲಕ ಎಟಿಎಂ ಗಳಲ್ಲಿ ಹಣ ತೆಗೆದರೆ ಪ್ರತಿ ವಹಿವಾಟಿಗೆ ರೂ.25 ಶುಲ್ಕ ವಿಧಿಸುವುದಾಗಿ ಎಸ್ ಬಿಐ ಹೇಳಿದ್ದು, ಜೂ.1 ರಿಂದಲೇ ಜಾರಿಗೆ ಬರಲಿದೆ. ಬೇಸಿಕ್ ಸೇವಿಂಗ್ಸ್ ಬ್ಯಾಂಕ್ಸ್ ಡೆಪಾಸಿಟ್ ಖಾತೆ (ಬಿಎಸ್ ಬಿಡಿಎ) ಗಳಲ್ಲಿ ನಾಲ್ಕು ವಹಿವಾಟುಗಳ ನಂತರದ ವಹಿವಾಟುಗಳಿಗೆ ವಿಧಿಸುವ ಶುಲ್ಕವನ್ನೂ ವಿಧಿಸಲಾಗುತ್ತದೆ ಎಂದು ಎಸ್ ಬಿಐ ತಿಳಿಸಿದೆ. 
ಇನ್ನು ನಿಯಮಿತ ಉಳಿತಾಯ ಬ್ಯಾಂಕ್ ಖಾತೆದಾರಿಗೆ ಎಟಿಎಂ ಗಳಲ್ಲಿನ ಉಚಿತ 8 ವಹಿವಾಟುಗಳು ಹಾಗೆಯೇ ಮುಂದುವರೆಯಲಿದ್ದು, ಮೆಟ್ರೋ ನಗರಗಳ ಹೊರತಾಗಿ ಈ ಸೌಲಭ್ಯ ಪ್ರತಿ ತಿಂಗಳಿಗೆ 10 ವಹಿವಾಟಿನ ವರೆಗೆ ಲಭ್ಯವಿರಲಿದೆ.  
ಹೊಸ ನಿಯಮಗಳ ಪ್ರಕಾರ 1 ಲಕ್ಷದ ವರೆಗಿನ ಐಎಂಪಿಎಸ್ ಅಥವಾ ತ್ವರಿತ ಹಣ ವರ್ಗಾವಣೆಗೆ 5 ರೂಪಾಯಿ ಸೇವಾ ತೆರಿಗೆ  ಶುಲ್ಕ ವಿಧಿಸಲಾಗುತ್ತದೆ. 1-2 ಲಕ್ಷಕ್ಕೆ ರೂ. 5 ಲಕ್ಷಕ್ಕಿಂತ ಹೆಚ್ಚಿನ ವರ್ಗಾವಣೆಗೆ ರೂ. 25 ಶುಲ್ಕ ಹಾಗೂ ಸೇವಾ ತೆರಿಗೆ ವಿಧಿಸಲಾಗುತ್ತದೆ.
ಜೂನ್ 1ರಿಂದ ಆರಂಭವಾಗಿ 10 ಚೆಕ್ ಗಳ ಚೆಕ್ ಬುಕ್ಕಿಗೆ ರೂ 30 ಜತೆಗೆ ಸೇವಾ ತೆರಿಗೆಯನ್ನು ಶುಲ್ಕವಾಗಿ ವಿಧಿಸಲಾಗುತ್ತಿದ್ದು. ದೇಶದ ನಾಗರಿಕರು ಹೆಚ್ಚು ಡಿಜಿಟಲ್ ವಹಿವಾಟುಗಳನ್ನು ನಡೆಸುವಂತೆ ಭಾರತ ಸರ್ಕಾರ ಕರೆ ನೀಡುತ್ತಿದ್ದರೂ ಎಸ್ ಬಿಐ ಮಾತ್ರ ಹೆಚ್ಚು ಡಿಜಿಟಲ್ ವಹಿವಾಟು ನಡೆಸಿದಂತೆಲ್ಲಾ ಹೆಚ್ಚು ಹೆಚ್ಚು ಶುಲ್ಕ ವಿಧಿಸುವ ಹೊಸ ನಿಯಮವನ್ನು ಜಾರಿಗೆ ತಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com