ರಕ್ಷಣಾ ಸಚಿವೆ ನಿರ್ಮಲಾ ಸೀತಾರಮನ್ ರನ್ನು ಭೇಟಿ ಮಾಡಿದ ಭೂತಾನ್ ದೊರೆ ವಾಂಗ್ ಚುಕ್

ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭೂತಾನ್ ರಾಜದಂಪತಿಗಳದ, ಜಿಗ್ ಮೆ ಖೇಸರ್ ನಂಜಿಲ್ ವಾಂಗ್ ಚುಕ್ ಮತ್ತು ಜೆಟ್ಸುನ್ ಪೆಮಾ ವಾಂಗ್ ಚುಕ್ ಅವರನ್ನು ದೆಹಲಿಯಲ್ಲಿ........
ರಕ್ಷಣಾ ಸಚಿವೆ ನಿರ್ಮಲಾ ಸೀತಾರಮನ್, ಭೂತಾನ್ ದೊರೆ ವಾಂಗ್ ಚುಕ್ ಭೇಟಿ
ರಕ್ಷಣಾ ಸಚಿವೆ ನಿರ್ಮಲಾ ಸೀತಾರಮನ್, ಭೂತಾನ್ ದೊರೆ ವಾಂಗ್ ಚುಕ್ ಭೇಟಿ
ನವದೆಹಲಿ: ಭಾರತದ  ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭೂತಾನ್ ರಾಜದಂಪತಿಗಳದ, ಜಿಗ್ ಮೆ ಖೇಸರ್ ನಂಜಿಲ್ ವಾಂಗ್ ಚುಕ್ ಮತ್ತು ಜೆಟ್ಸುನ್ ಪೆಮಾ ವಾಂಗ್ ಚುಕ್ ಅವರನ್ನು ದೆಹಲಿಯಲ್ಲಿ ಇಂದು ಭೇಟಿಯಾದರು.
ಭೂತಾನ್ ರಾಜ ತಮ್ಮ ನಾಲ್ಕು ದಿನಗಳ ಭಾರತ ಭೇಟಿಯನ್ನು ಮಂಗಳವಾರದಿಂದ ಪ್ರಾರಂಭಿಸಿದ್ದಾರೆ. ತಮ್ಮ ಭೇಟಿಯ ಮೊದಲ ದಿನದಲ್ಲಿ ಭೂತಾನ್ ರಾಜ ಪರಿವಾರ ವಿದೇಶಾಂಗ  ವ್ಯವಹಾರ ಸಚಿವರಾದ ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾಗಿತ್ತು. ನಿನ್ನೆ ರಾಷ್ಟ್ರಪತಿ ಕೋವಿಂದ್ ಮತ್ತು ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ್ದ ಭೂತಾನ್ ರಾಜರು ಅವರ ಗೌರವಾರ್ಥ ಏರ್ಪಡಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡಿದ್ದರು.
ಇದರೊಡನೆ ಕೇಂದ್ರ ಹಣಕಾಸು ಸಚಿವರಾದ ಅರುಣ್ ಜೇಟ್ಲಿಯವರನ್ನು ಸಹ ಭೂತಾನ್ ರಾಜರು ಭೇಟಿಯಾಗಲಿದ್ದಾರೆ. ಭಾರತ ಮತ್ತು ಚೀನಾ ನಡುವಿನ ಡೊಕ್ಲಾಮ್ ವಿವಾದ ಕೊನೆಗೊಂಡ ಬಳಿಕ ಭೂತಾನ್ ದೊರೆಯ ಪ್ರಥಮ ಭಾರತ ಪ್ರವಾಸ ಇದಾಗಿದೆ.
ದ್ವಿಪಕ್ಷೀಯ ಸಹಕಾರ, ಸಮಗ್ರತೆ ಗೆ ಈ ಭೇಟಿ ಸಹಕಾರಿಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ
ಕಳೆದ ತಿಂಗಳಲ್ಲಿ ಭೂತ್ನ್ ಗೆ ತೆರಳಿದ್ದ ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಭೂತಾನ್ ದೊರೆ ವಾಂಗ್ ಚುಕ್ ಮತ್ತು ಪ್ರಧಾನಿ ತ್ಸೇರಿಂಗ್ ಟೋಗ್ಬೇ ಅವರೊದನೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರು..

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com