ಈ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಸೂಚನೆ ಹೊರಡಿಸಿದ್ದು, ಶಾಹಿದ್ ಯೂಸುಫ್ ನ ಕೃಷಿ ಇಲಾಖೆಯ ಉದ್ಯೋಗದಿಂದ ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಸರ್ಕಾರಿ ನಿಯಮಗಳಂತೆ ಶಾಹಿದ್ ಯೂಸುಫ್ ರನ್ನು ಅಮಾನತು ಮಾಡಲಾಗಿದೆ ಎಂದು ಹೇಳಲಾಗಿದ್ದು, ಎಫ್ ಐಆರ್ ದಾಖಲಾಗಿ ಬಂಧನಕ್ಕೀಡಾದ ವ್ಯಕ್ತಿಯನ್ನು 48 ಗಂಟೆಗಳೊಳಗೆ ಅಮಾನತು ಮಾಡಬೇಕು ಎಂಬ ನಿಯಮಗಳ ಅನುಸಾರ ಶಾಹಿದ್ ಯೂಸುಫ್ ರನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.