ಇವಿಎಂ ವಿರೂಪಗೊಳಿಸದೆ ಕಮ್ಯುನಿಸ್ಟರನ್ನು ಮಣಿಸಿದ 'ಹೆಣ್ಣು ಹುಲಿ': ಮಮತಾರನ್ನು ಹೊಗಳಿದ ಉದ್ಧವ್

ಪಶ್ಚಿಮ ಬಂಗಾಳದಲ್ಲಿ ಕಮ್ಯೂನಿಸ್ಟರನ್ನು ನಾಶ ಮಾಡುವಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ವಿಫಲರಾಗಿದ್ದು ಆದರೆ ಪಶ್ಚಿಮ ಬಂಗಾಳದ 'ಹೆಣ್ಣು ಹುಲಿ' ಮುಖ್ಯಮಂತ್ರಿ ಮಮತಾ...
ಉದ್ಧವ್ ಠಾಕ್ರೆ-ಮಮತಾ ಬ್ಯಾನರ್ಜಿ
ಉದ್ಧವ್ ಠಾಕ್ರೆ-ಮಮತಾ ಬ್ಯಾನರ್ಜಿ
ಮುಂಬೈ: ಪಶ್ಚಿಮ ಬಂಗಾಳದಲ್ಲಿ ಕಮ್ಯೂನಿಸ್ಟರನ್ನು ನಾಶ ಮಾಡುವಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ವಿಫಲರಾಗಿದ್ದು ಆದರೆ ಪಶ್ಚಿಮ ಬಂಗಾಳದ 'ಹೆಣ್ಣು ಹುಲಿ' ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಕಾರ್ಯವನ್ನು ಸಾಧಿಸಿ ತೋರಿಸಿದ್ದಾರೆ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಹೇಳಿದ್ದಾರೆ. 
ಮಮತಾ ಬ್ಯಾನರ್ಜಿ ಅವರ ಕೆಲ ನಿಲುವುಗಳು ವಿವಾದಾಸ್ಪದವಾಗಿರುತ್ತವೆ ಮತ್ತು ಅವುಗಳಲ್ಲಿ ಕೆಲವು ಶಿವಸೇನೆಯ ನಿಲುವುಗಳ ಜತೆಗೆ ಹೊಂದಾಣಿಕೆಯಾಗುವುದಿಲ್ಲ. ಆದರೆ ಅವರು ತಮ್ಮ ರಾಜ್ಯದಲ್ಲಿ ಕಮ್ಯುನಿಸ್ಟರನ್ನು ನಿರ್ಮೂಲನೆ ಮಾಡಿದ್ದು ಶಿವಸೇನೆ ಸಹ ಯಾವಾಗಲು ಕಮ್ಯುನಿಸ್ಟರ ವಿರುದ್ಧ ಹೋರಾಡುತ್ತಲೆ ಇರುತ್ತದೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ. 
ಬಿಜೆಪಿ ಹಾಗೂ ಕಾಂಗ್ರೆಸ್ ಮಾಡಲಾಗದ ಕೆಲಸವನ್ನು ಪಶ್ಚಿಮ ಬಂಗಾಳದ ಹೆಣ್ಣು ಹುಲಿ ಮಮತಾ ಬ್ಯಾನರ್ಜಿ ಅವರು ಕಮ್ಯುನಿಸ್ಟರ 25 ವರ್ಷಗಳ ಸುದೀರ್ಘ ನಿಯಂತ್ರಣವನ್ನು ಕೊನೆಗೊಳಿಸಿದ್ದಾರೆ ಎಂದು ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಬರೆದಿದ್ದಾರೆ. 
ಇವಿಎಂಗಳನ್ನು ವಿರೂಪಗೊಳಿಸಿದೆ ಅಥವಾ ಮತಗಳನ್ನು ಖರೀದಿಸದೇ. ಮತದಾರರು ಅವರ ಮೇಲೆ ನಂಬಿಕೆ ಇಟ್ಟು ರಾಜ್ಯವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಿದ್ದಾರೆ. ಆದರೆ ಪಶ್ಚಿಮ ಬಂಗಾಳದಲ್ಲಿ ಅಭಿವೃದ್ಧಿಯನ್ನು ನಿಲ್ಲಿಸಲು ಮತ್ತು ಆರ್ಥಿಕ ಸಮಸ್ಯೆಗಳನ್ನು ಸೃಷ್ಟಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಠಾಕ್ರೆ ಹೇಳಿದ್ದಾರೆ. 
ಎನ್ಡಿಎ ಮಿತ್ರ ಪಕ್ಷ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದಕ್ಕೆ ಬಿಜೆಪಿ ತೀವ್ರವಾಗಿ ಖಂಡಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com