ಕೆಲ ದಿನಗಳ ಹಿಂದಷ್ಟೇ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ನೇತ್ರ ಪರಿಖ್ ಎಂಬುವವರು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದರು. ಟ್ವೀಟ್ ನಲ್ಲಿ ಕೀನ್ಯಾದಲ್ಲಿರುವ ನೈರೋಬಿ ನಗರದಲ್ಲಿರುವ ಮನೆಯೊಂದರಲ್ಲಿ ಭಾರತೀಯ ಬಾಲಕನ ಮೇಲೆ ಹಲ್ಲೆ ನಡೆದಿದೆ ಎಂದು ಹೇಳಿದ್ದರು.
ನೈರೋಬಿಯಲ್ಲಿ ಭಾರತೀಯ ಕುಟುಂಬದ ಬಾಲಕನನ್ನು ಗುಂಡಿಟ್ಟು ಹತ್ಯೆ ಮಾಡಿಲಾಗಿದೆ. ಈ ಘಟನೆ ಬಗ್ಗೆ ವರದಿಗಳು ಪರಿಶೀಲಿಸಿ, ಕುಟುಂಬಸ್ಥರಿಗೆ ಸಹಾಯ ಹಾಗೂ ಬೆಂಬಲವನ್ನು ನೀಡಿ ಎಂದು ಪರಿಖ್ ಅವರು ಹೇಳಿದ್ದರು. ಇದಲ್ಲದೆ ಮಹಿಳೆ ಬಾಲಕನ ಹೆಸರನ್ನು ಹೇಳಿಕೊಂಡಿದ್ದರು. ಬಂಟಿ ಶಾಹ್ ಎಂಬ ಬಾಲಕನನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದ್ದು. ಬಾಲಕ ಬೊಬ್ಮಿಲ್ ಇಂಡಸ್ಟ್ರೀಸ್ ಲಿಮಿಟೆಡ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂದು ತಿಳಿಸಿದ್ದರು.
ಈ ಟ್ವೀಟ್ ಪ್ರತಿಕ್ರಿಯೆ ನೀಡಿರುವ ಸುಷ್ಮಾ ಸ್ವರಾಜ್ ಅವರು, ಕೀನಾದಲ್ಲಿರುವ ಭಾರತೀಯ ರಾಯಭಾರಿ ಸುಚಿತ್ರಾ ಅವರಿಗೆ ಘಟನೆ ಕುರಿತಂತ ವರದಿ ಸಲ್ಲಿಸುವಂತೆ ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಿದ್ದ ಭಾರತೀಯರೊಬ್ಬರು ಕೆಲ ದಿನಗಳ ಹಿಂದಷ್ಟೇ ಸಾವನ್ನಪ್ಪಿದ್ದರು. ಈ ಪ್ರಕರಣ ಕುರಿತಂತೆಯೂ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿಸುವ ಸುಷ್ಮಾ ಸ್ವರಾಜ್ ಅವರು, ಸಂತ್ರಸ್ತ ಭಾರತೀಯ ಕುಟುಂಬಸ್ಥರಿಗೆ ಸಹಾಯ ಮಾಡುವಂತೆ ದಕ್ಷಿಣ ಆಫ್ರಿಕಾದಲ್ಲಿರುವ ಭಾರತೀಯ ರಾಯಭಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.