ಪ್ಯಾರಡೈಸ್‌ ಪೇಪರ್ಸ್‌ ಲೀಕ್: ಬಹು ಸಂಸ್ಥೆಗಳಿಂದ ತನಿಖೆ

ತೆರಿಗೆ ವಂಚಿಸಿ ವಿದೇಶಗಳಲ್ಲಿ ಬೃಹತ್ ರಹಸ್ಯ ಸಂಪತ್ತು ಹೊಂದಿರುವವರ ಪಟ್ಟಿಯನ್ನು 'ಪ್ಯಾರಡೈಸ್ ಪೇಪರ್ಸ್' ಭಾನುವಾರ ಬಿಡುಗಡೆ ಮಾಡಿದ್ದು,....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ತೆರಿಗೆ ವಂಚಿಸಿ ವಿದೇಶಗಳಲ್ಲಿ ಬೃಹತ್ ರಹಸ್ಯ ಸಂಪತ್ತು ಹೊಂದಿರುವವರ ಪಟ್ಟಿಯನ್ನು 'ಪ್ಯಾರಡೈಸ್ ಪೇಪರ್ಸ್' ಭಾನುವಾರ ಬಿಡುಗಡೆ ಮಾಡಿದ್ದು, ಈ ಕುರಿತು ಬಹು ಸಂಸ್ಥೆಗಳ ತಂಡ(ಎಂಎಜಿ) ತನಿಖೆ ನಡೆಸಲು ಮುಂದಾಗಿದೆ.
ಪನಾಮಾ ಪೇಪರ್ ಹಗರಣದ ಬಳಿಕ ಮತ್ತೊಂದು ಬೃಹತ್ ತೆರಿಗೆ ವಂಚನೆ ಹಗರಣ ಈಗ ಬೆಳಕಿಗೆ ಬಂದಿದ್ದು, ಪನಾಮಾ ಪೇಪರ್ಸ್‌ ಲೀಕ್‌ ಆದ ಸಂದರ್ಭದಲ್ಲಿ ತನಿಖೆ ನಡೆಸಲು ರಚನೆಯಾಗಿದ್ದ ಹಲವು ಸಂಸ್ಥೆಗಳೇ ಈಗ ತನಿಖೆ ನಡೆಸಲು ಮತ್ತೆ ಮುಂದಾಗಿವೆ ಎಂದು ಮೂಲಗಳು ತಿಳಿಸಿವೆ.
ಈ ಬಹು ಸಂಸ್ಥೆಯಲ್ಲಿ ಕೇಂದ್ರೀಯ ನೇರ ತೆರಿಗೆ ಮಂಡಳಿ, ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯದ ಹಾಗೂ ಆರ್ಥಿಕ ಗುಪ್ತಚರ ಇಲಾಖೆ ಹಾಗೂ ಭಾರತೀಯ ರಿಸರ್ವ್‌ ಬ್ಯಾಂಕ್‌ ಅಧಿಕಾರಿಗಳು ಇರುತ್ತಾರೆ.
ಈ ಸಂಸ್ಥೆಯು ಮೊದಲಿಗೆ ಕಂಪನಿಗಳ ಆದಾಯ ತೆರಿಗೆ ಸಲ್ಲಿಕೆಯ ಮಾಹಿತಿಯನ್ನು ಪರಿಶೀಲಿಸಲಿದೆ. ನಂತರ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ಯಾರಡೈಸ್‌ ಪೇಪರ್ಸ್‌ ಪಟ್ಟಿಯಲ್ಲಿ ಕೇಂದ್ರ ಸರ್ಕಾರದ ಇಬ್ಬರು ಸಚಿವರು ಸೇರಿದಂತೆ  ಪಟ್ಟಿಯಲ್ಲಿ ಸುಮಾರು 715ಕ್ಕೂ ಅಧಿಕ ಮಂದಿ ಭಾರತೀಯ ಹೆಸರು ಇದೆ ಎಂದು ಹೇಳಲಾಗುತ್ತಿದೆ.
ಖ್ಯಾತ ಆಂಗ್ಲ ದೈನಿಕವೊಂದು ವರದಿ ಮಾಡಿರುವಂತೆ, ಅಮೆರಿಕ ಮೂಲದ ಇಂಟರ್ ನ್ಯಾಷನಲ್ ಕನ್ಸಾರ್ಟಿಯಂ ಆಫ್ ಜರ್ನಲಿಸ್ಟ್ಸ್ ತಂಡ, "ಪ್ಯಾರಡೈಸ್ ಪೇಪರ್ಸ್" ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಿದ ಹಲವು ದಾಖಲೆಗಳು ವಿಶ್ವದ ಹೆಸರಾಂತ ಕಂಪೆನಿಗಳ ಅವ್ಯವಹಾರವನ್ನು ಬಯಲಿಗೆಳೆದಿವೆ. ವಾಣಿಜ್ಯ ಕಂಪನಿಗಳು ಮಾತ್ರವಲ್ಲದೇ ರಾಜಕೀಯ, ಕಿರುತೆರೆ, ಬೆಳ್ಳೆತೆರೆ ಮನರಂಜನಾ ಕ್ಷೇತ್ರದ ಹಲವು ಖ್ಯಾತನಾಮರ ಹೆಸರುಗಳು ಕೂಡ ಈ ಪಟ್ಟಿಯಲ್ಲಿ ಇದೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com