ಸಂಚಾರಿ ನಿಯಮ ಉಲ್ಲಂಘಿಸಿದವನ ಕಾರಿಗೆ ಎದುರಾಗಿ ನಿಂತ ಬೈಕ್ ಸವಾರನ ಮೇಲೆ ಗಂಭೀರ ಹಲ್ಲೆ

ಭಾರತದಲ್ಲಿ ಸಂಚಾರಿ ನಿಯಮ ಪಾಲಿಸುವುದು ಎಂದರೇ ಸವಾರರಿಗೆ ಅಷ್ಟಕಷ್ಟೆ. ಇಂತಹ ಸಮಯದಲ್ಲಿ ತನ್ನ ಬೈಕ್ ಗೆ ಎದುರಾಗಿ ಬಂದ ಕಾರಿಗೆ ಎದುರಾಗಿ ನಿಂತು...
ಬೈಕ್ ಸವಾರ
ಬೈಕ್ ಸವಾರ
Updated on: 
ಇಂದೋರ್: ಭಾರತದಲ್ಲಿ ಸಂಚಾರಿ ನಿಯಮ ಪಾಲಿಸುವುದು ಎಂದರೇ ಸವಾರರಿಗೆ ಅಷ್ಟಕಷ್ಟೆ. ಇಂತಹ ಸಮಯದಲ್ಲಿ ತನ್ನ ಬೈಕ್ ಗೆ ಎದುರಾಗಿ ಬಂದ ಕಾರಿಗೆ ಎದುರಾಗಿ ನಿಂತು ಬೈಕ್ ಸವಾರನೊಬ್ಬ ಧೈರ್ಯ ತೋರಿದ್ದಾನೆ. 
ಇಂದೋರ್ ನಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿ ಚಾಲಕನೊಬ್ಬ ಒನ್ ವೇಯಲ್ಲಿ ಕಾರು ಚಲಾಯಿಸಿಕೊಂಡು ಬಂದಿದ್ದಾನೆ. ಈ ವೇಳೆ ಬೈಕ್ ಸವಾರನೊಬ್ಬ ಬೈಕ್ ನಿಲ್ಲಿಸಿ ಕಾರಿಗೆ ಜಾಗ ಬಿಡದೆ ನಿಂತಿದ್ದಾನೆ. ಇದರಿಂದ ಆಕ್ರೋಶಗೊಂಡ ಕಾರಿನ ಚಾಲಕ ಕಾರನ್ನು ಬೈಕ್ ಮೇಲೆ ಹತ್ತಿಸುವಂತೆ ಮುಂದಕ್ಕೆ ಓಡಿಸುತ್ತಾನೆ. ಆದರೆ ಇದಕ್ಕೆ ಬೈಕ್ ಸವಾರ ಎದುರುವುದಿಲ್ಲ. ನಂತರ ಅಲ್ಲೇ ಇದ್ದ ವ್ಯಕ್ತಿಯೊಬ್ಬ ಕಾರು ಚಾಲಕನಿಗೆ ದಾರಿ ಬಿಡುವಂತೆ ಹೇಳುತ್ತಾನೆ. 
ಕಾರಿನಿಂದ ಇಳಿದ ಚಾಲಕ ಬೈಕ್ ಸವಾರನಿಗೆ ಸಲಾಂ ಹಾಕುತ್ತಾನೆ. ನಂತರ ಆಕ್ರೋಶಗೊಂಡ ಸವಾರ ಬೈಕ್ ಚಾಲಕನನ್ನು ಹಿಡಿದು ಗಂಭೀರವಾಗಿ ಥಳಿಸುತ್ತಾನೆ. ಈ ವೇಳೆ ನೂರಾರು ಮಂದಿ ಅಲ್ಲಿ ಸೇರಿದರು ಯಾರೂ ಸಹ ಕಾರು ಚಾಲಕನನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ಕಾರಿನ ಚಾಲಕನಿಗೆ ಭೀಮಕಾಯದಂತ ದೇಹ ಇದ್ದಿದ್ದರಿಂದ ಬೈಕ್ ಸವಾರನನ್ನು ಚನ್ನಾಗಿ ಥಳಿಸಿದ್ದಾನೆ. ಈ ಘಟನೆಯನ್ನು ವ್ಯಕ್ತಿಯೊಬ್ಬ ಫೇಸ್ ಬುಕ್ ಗೆ ಅಪ್ ಲೋಡ್ ಮಾಡಿದ್ದು ಬೈಕ್ ಸವಾರನ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
ಇನ್ನು ಸಂಚಾರಿ ನಿಯಮ ಉಲ್ಲಂಘಿಸಿ ಓನ್ ವೇಯಲ್ಲಿ ಬಂದು ಬೈಕ್ ಸವಾರನಿಗೆ ಗಂಭೀರವಾಗಿ ಥಳಿಸಿರುವ ದೃಶ್ಯಗಳ ವಿಡಿಯೋವನ್ನು ಆಧಾರವಾಗಿಟ್ಟುಕೊಂಡು ಪೊಲೀಸರು ಕಾರು ಚಾಲಕನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com