ಆರ್ ಬಿ ಐ ಮಾಜಿ ಗವರ್ನರ್ ರಘುರಾಮ್ ರಾಜನ್ ಎಎಪಿ ಯಿಂದ ರಾಜ್ಯಸಭೆಗೆ?

ಮುಂದಿನ ಜನವರಿಯಲ್ಲಿ ತೆರವಾಗುವ ದೆಹಲಿಯ ಮೂರು ರಾಜ್ಯ್ ಸಬಾ ಸ್ಥಾನಗಳಿಗೆ ಆಮ್ ಆದ್ಮಿ ಪಕ್ಷವು ರಾಜಕೀಯ ಪಕ್ಷದ ಹೊರಗಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ.
ರಘುರಾಮ್ ರಾಜನ್
ರಘುರಾಮ್ ರಾಜನ್
ನವದೆಹಲಿ: ಮುಂದಿನ ಜನವರಿಯಲ್ಲಿ ತೆರವಾಗುವ ದೆಹಲಿಯ ಮೂರು ರಾಜ್ಯ್ ಸಬಾ ಸ್ಥಾನಗಳಿಗೆ ಆಮ್ ಆದ್ಮಿ ಪಕ್ಷವು ರಾಜಕೀಯ ಪಕ್ಷದ ಹೊರಗಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ. ಅದರಂತೆ ಒಂದು ಸ್ಥಾನಕ್ಕೆ ರಿಸರ್ವ್ ಬ್ಯಾಂಕ್ ನ ಮಾಜಿ ಗವರ್ನರ್ ರಘುರಾಮ್ ರಾಜನ್ ರನ್ನು ಆಯ್ಕೆ ಮಾಡುವ ಸಾದ್ಯತೆ ಇದೆ.
ರಾಜನ್ ಅವರನ್ನು ರಾಜ್ಯಸಭಾ ಸ್ಥಾನಕ್ಕೆ ನಾಮಕರಣ ಮಾಡುವುದಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆಸಕ್ತಿ ತೋರಿದ್ದಾರೆ.ಇದಾಗಲೇ ಪಕ್ಷದ ಸಭೆಯಲ್ಲಿ ಈ ಕುರಿತಂತೆ ಚರ್ಚೆ ನಡೆಸಿದ್ದು ಈ ಸಂಬಂಧ ರಾಜನ್ ಅವರಿಗೆ ಪಕ್ಷವು ಈ ಮೇಲ್ ಅನ್ನು ರವಾನಿಸಿದೆ.
ರಘುರಾಮ್ ರಾಜನ್ ಆರ್ ಬಿ ಐ ಗವರ್ನರ್ ಹುದ್ದೆಯಿಂದ ಕೆಳಗಿಳಿದ ಬಳಿಕ ಅವರ ಹೆಸರು ಅಂತರಾಷ್ಟ್ರೀಯ ಮಟ್ಟದಲ್ಲಿ ಕೇಳಿ ಬರುತ್ತಿದ್ದು ನೊಬೆಲ್ ಪಾರಿತೋಷಕ ಸಿಗುವುದಾಗಿ ವರದಿಯಾದ ಬೆನ್ನಲ್ಲೇ ಅಮೆರಿಕದ ಫೆಡರಲ್‌ ರಿಸರ್ವ್‌ ಬ್ಯಾಂಕ್‌ ಮುಖ್ಯಸ್ಥ ಸ್ಥಾನ ಹೊಂದುತ್ತಾರೆಂದೂ ವರದಿಯಾಗಿತ್ತು.
ಇದೆ ವೇಳೆ ಆಮ್ ಆದ್ಮಿ ಪಕ್ಷದ ಇನ್ನೋರ್ವ ಪ್ರಮುಖ ಕುಮಾರ್ ವಿಶ್ವಾಸ್ ತಾವೂ ಸಹ ರಾಜ್ಯ ಸಭಾ ಸದಸ್ಯನಾಗಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ನಿಡಿದ್ದ ಸಂದರ್ಶನದಲ್ಲಿ ವಿಶ್ವಾಸ್ ತಮ್ಮ ಮಹತ್ವಾಕಾಂಕ್ಷೆಯನ್ನು ತೋಡಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com