ಸಿತಾರ ದೇವಿ ಅವರ ನೃತ್ಯ ಎಷ್ಟು ಖ್ಯಾತಿ ಗಳಿಸಿತ್ತು ಎಂದರೆ ಅವರ 12ನೇ ವಯಸ್ಸಿನಲ್ಲೇ ಹಿಂದಿ ಚಿತ್ರಕ್ಕಾಗಿ ನಿರ್ದೇಶಕ ನಿರಂಜನ್ ಶರ್ಮಾ ಎಂಬುವವರು ಅವರಿಗೆ ಅವಕಾಶ ನೀಡಿದ್ದರು. ಆ ಬಳಿಕ ಸಾಕಷ್ಟು ಹಿಂದಿ ಚಿತ್ರಗಳಲ್ಲಿ ಸಿತಾರಾ ದೇವಿ ತಮ್ಮ ನೃತ್ಯ ಪ್ರದರ್ಶನ ಮಾಡಿದ್ದರು. 1951ರಲ್ಲಿ ತೆರೆಕಂಡ ನಾಗಿನ, 1954ರಲ್ಲಿ ರೋಟಿ, ವತನ್ ಮತ್ತು 1957ರಲ್ಲಿ ಅಂಜಲಿ ಚಿತ್ರಗಳಲ್ಲಿ ಸಿತಾರಾ ದೇವಿ ನೃತ್ಯ ಪ್ರದರ್ಶನ ನೀಡಿದ್ದರು.