ಕೋಲ್ಕತ್ತಾ ನನ್ ಅತ್ಯಾಚಾರ ಪ್ರಕರಣ: ಬಾಂಗ್ಲಾ ವ್ಯಕ್ತಿಗೆ ಜೀವನ ಪರ್ಯಂತ ಜೈಲು ಶಿಕ್ಷೆ

2015ರಲ್ಲಿ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ರಾಣಾಘಾಟ್‌ನಲ್ಲಿ ನನ್ ಮೇಲೆ ನಡೆದ ಅತ್ಯಾಚಾರ ಪ್ರಕರಣ ಸಂಬಂಧ ನ್ಯಾಯಾಲಯ ಬಾಂಗ್ಲಾದೇಶದ ವ್ಯಕ್ತಿಗೆ...
ತೀರ್ಪು
ತೀರ್ಪು
ಕೋಲ್ಕತ್ತಾ: 2015ರಲ್ಲಿ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ರಾಣಾಘಾಟ್‌ನಲ್ಲಿ ನನ್ ಮೇಲೆ ನಡೆದ ಅತ್ಯಾಚಾರ ಪ್ರಕರಣ ಸಂಬಂಧ ನ್ಯಾಯಾಲಯ ಬಾಂಗ್ಲಾದೇಶದ ವ್ಯಕ್ತಿಗೆ ಜೀವನ ಪರ್ಯಂತ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆರು ಆರೋಪಿಗಳು ದೋಷಿಗಳು ಎಂದು ತೀರ್ಪು ನೀಡಿತ್ತು. ಅಲ್ಲದೆ ಶಿಕ್ಷೆಯನ್ನು ಇಂದಿಗೆ ಘೋಷಿಸುವುದಾಗಿ ಹೇಳಿತ್ತು.
ಮಾರ್ಚ್ 14, 2015ರಂದು ರಾಣಾಘಾಟ್ ನ ಕಾನ್ವೆಂಟ್ ಗೆ ನುಗ್ಗಿದ ಬಾಂಗ್ಲಾದೇಶದ ಎಂಟು ಜನರ ತಂಡ, 72 ವರ್ಷದ ನನ್ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ದರೋಡೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಅತ್ಯಾಚಾರ ಪ್ರಕರಣದಲ್ಲಿ ಓರ್ವ ಆರೋಪಿ ತಪ್ಪಿತಸ್ಥ ಮತ್ತು ಇತರರು ದರೋಡೆ ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ತೀರ್ಪು ನೀಡಿ, ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿತ್ತು. ಇಂದು ಶಿಕ್ಷೆ ಪ್ರಮಾಣವನ್ನು ಘೋಷಿಸಿದ ನ್ಯಾಯಾಲಯ ಬಾಂಗ್ಲಾದೇಶದ ನಜರುಲ್ಲ್ ಇಸ್ಲಾಂಗೆ ಜೀವನ ಪರ್ಯಂತ ಜೈಲು ಶಿಕ್ಷೆ ವಿಧಿಸಿದೆ. ಇನ್ನುಳಿದಂತೆ ಐದು ಮಂದಿಗೆ 10 ಜೈಲು ಶಿಕ್ಷೆ ವಿಧಿಸಿದ್ದು 10 ಸಾವಿರ ದಂಡ ವಿಧಿಸಿದೆ. ಒಂದು ವೇಳೆ ದಂಡ ಕಟ್ಟಲು ಅಪರಾಧಿಗಳು ವಿಫಲರಾದರೆ ಹೆಚ್ಚುವರಿಯಾಗಿ ಎರಡುವರೆ ವರ್ಷ ಜೈಲು ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯ ಹೇಳಿದೆ. 
ಘಟನೆಯ ಬಳಿಕ ದೆಹಲಿಗೆ ಸ್ಥಳಾಂತರಗೊಂಡಿದ್ದ ನನ್, ಆರೋಪಿಗಳು ರಾಣಾಘಾಟ್ ನಲ್ಲಿ ಬಲವಾದ ಸಂಪರ್ಕ ಹೊಂದಿರುವುದರಿಂದ ಪ್ರಕರಣವನ್ನು ರಾಣಾಘಾಟ್ ನಿಂದ ಕೋಲ್ಕತಾಗೆ ವರ್ಗಾವಣೆ ಮಾಡುವಂತೆ ಹೈಕೋರ್ಟ್ ಗೆ ಮನವಿ ಮಾಡಿದ್ದರು. ಮನವಿ ಪುರಸ್ಕರಿಸಿದ ಕೋರ್ಟ್ ಕಳೆದ ವರ್ಷ ಮೇ ತಿಂಗಳಲ್ಲಿ ಕೋಲ್ಕತಾ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com