• Tag results for ಕೋಲ್ಕತಾ

ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೆಜೌಲ್ ಹಕ್ ಕೋವಿಡ್ ಸೋಂಕಿಗೆ ಬಲಿ

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಶಮ್‌ಶೇರ್ ಗುಂಜ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರೆಜೌಲ್ ಹಕ್ ಆಸ್ಪತ್ರೆಯಲ್ಲಿ ಕೋವಿಡ್ -19 ಸೋಂಕಿನಿಂದ ಸಾವನ್ನಪ್ಪಿದ್ದಾರೆ.

published on : 15th April 2021

ಹಿಂದೂ, ಮುಸಲ್ಮಾನರ ಮತಬ್ಯಾಂಕ್ ವಿಭಜನೆಗೆ ಬಿಜೆಪಿಯಿಂದ ಎಐಎಂಐಎಂ, ಐಎಸ್ಎಫ್ ಗೆ ಹಣ: ಮಮತಾ ಬ್ಯಾನರ್ಜಿ ಆರೋಪ

ತನ್ನ ರಾಜಕೀಯ ಲಾಭಕ್ಕಾಗಿ ಭಾರತೀಯ ಜನತಾ ಪಕ್ಷ ಹಿಂದೂ-ಮುಸಲ್ಮಾನರ ವಿಭಜಿಸಲು ಎಐಎಂಐಎಂ, ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್ಎಫ್) ಗೆ ಹಣ ನೀಡುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.

published on : 3rd April 2021

ಪಶ್ಚಿಮ ಬಂಗಾಳ ಚುನಾವಣೆ: ಮೊದಲ ಹಂತದಲ್ಲಿ ಶೇ.84.13ರಷ್ಟು ಮತದಾನ: ಚುನಾವಣಾ ಆಯೋಗ

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆದ 30 ವಿಧಾನಸಭಾ ಕ್ಷೇತ್ರಗಳ ಶೇಕಡಾ 84.13 ರಷ್ಟು ಮತದಾನವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ.

published on : 28th March 2021

ಭಾರತದಲ್ಲಿ ನಾಲ್ಕು ಪಾಕಿಸ್ತಾನ ರಚಿಸಬಹುದು: ವಿವಾದ ಸೃಷ್ಟಿಸಿದ ಟಿಎಂಸಿ ನಾಯಕ ಶೇಖ್ ಆಲಂ, ವಿಡಿಯೊ ವೈರಲ್

ಭಾರತದಲ್ಲಿರುವ ಶೇ.30ರಷ್ಟು ಮುಸಲ್ಮಾನರು ಒಂದಾದರೆ ಭಾರತದಲ್ಲಿ ನಾಲ್ಕು ಪಾಕಿಸ್ತಾನವನ್ನು ಸೃಷ್ಟಿ ಮಾಡಬಹುದು ಎಂದು ತೃಣಮೂಲಕ ಕಾಂಗ್ರೆಸ್ ಮುಖಂಡ ಶೇಖ್ ಆಲಂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

published on : 26th March 2021

ಪಶ್ಚಿಮ ಬಂಗಾಳ ಚುನಾವಣೆ: ವ್ಹೀಲ್‌ಚೇರ್ ನಲ್ಲಿಯೇ ಸಿಎಂ ಮಮತಾ ಬ್ಯಾನರ್ಜಿ ರೋಡ್‌ಶೋ

ಪಶ್ಚಿಮ ಬಂಗಾಳ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಕಾಲಿಗೆ ಪೆಟ್ಟು ಮಾಡಿಕೊಂಡಿರುವ ಸಿಎಂ ಮಮತಾ ಬ್ಯಾನರ್ಜಿ ಅವರು ಇಂದು ವ್ಙೀಲ್ ಚೇರ್ ನಲ್ಲಿಯೇ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ.

published on : 14th March 2021

ಮಮತಾ ಬ್ಯಾನರ್ಜಿ ಡಿಸ್ಚಾರ್ಜ್, ವೀಲ್ ಚೇರ್ ನಲ್ಲೇ ಆಸ್ಪತ್ರೆಯಿಂದ ಹೊರಬಂದ ದೀದಿ

ಎರಡು ದಿನಗಳ ಹಿಂದೆ ನಂದಿಗ್ರಾಮದಲ್ಲಿ ನಡೆದ ದಾಳಿಯಲ್ಲಿ ಗಾಯಗೊಂಡು ಎಸ್ಎಸ್ ಕೆಎಂ ಆಸ್ಪತ್ರೆಗೆ ದಾಖಲಾಗಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶುಕ್ರವಾರ ಡಿಸ್ಚಾರ್ಜ್ ಆಗಿದ್ದಾರೆ.

published on : 12th March 2021

ಮಮತಾ ಬ್ಯಾನರ್ಜಿ ಆಸ್ತಿ ಘೋಷಣೆ: ಕೇವಲ 9 ಗ್ರಾಂ ಚಿನ್ನ; ಸ್ವಂತ ವಾಹನ ಇಲ್ಲ!

ನಂದಿ ಗ್ರಾಮದಲ್ಲಿ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ತಮ್ಮ ಆಸ್ತಿ ಘೋಷಣೆ ಮಾಡಿದ್ದು ಮಮತಾ ಬ್ಯಾನರ್ಜಿ ಅವರ ಬಳಿ ಕೇವಲ 16.72 ಲಕ್ಷ ರೂ ಮೌಲ್ಯದ ಆಸ್ತಿ ಇದೆಯಂತೆ.

published on : 12th March 2021

ಬಂಗಾಳದಲ್ಲಿ ಸಚಿವರ ಮೇಲೆ ಬಾಂಬ್ ದಾಳಿ ಪ್ರಕರಣ: ಬಾಂಗ್ಲಾ ಪ್ರಜೆ ಬಂಧನ

ಪಶ್ಚಿಮ ಬಂಗಾಳದ ರೈಲು ನಿಲ್ದಾಣದಲ್ಲಿದ್ದ ಸಚಿವರ ಮೇಲೆ ಬಾಂಬ್ ದಾಳಿಯಾಗಿದ್ದು, ಈ ಘಟನೆಯಲ್ಲಿ ಒಬ್ಬರು ಮೃತಪಟ್ಟು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

published on : 24th February 2021

ಕೊರೋನಾ ಬೆನ್ನಲ್ಲೇ ದೇಶಕ್ಕೆ ಒಕ್ಕರಿಸಿದೆ ನಾಯಿ ವೈರಸ್; ಕೋಲ್ಕತಾದಲ್ಲಿ 3 ದಿನದಲ್ಲಿ 200 ನಾಯಿಗಳ ಸಾವು!

ದೇಶದಲ್ಲಿ ಮಾರಕ ಕೊರೋನಾ ವೈರಸ್ ನ 2ನೇ ಅಲೆಯ ಭೀತಿ ಆರಂಭವಾಗಿರುವಂತೆಯೇ ಇತ್ತ ಕೋಲ್ಕತಾದಲ್ಲಿ ವಿಚಿತ್ರ ಸೋಂಕು ಭಾರಿ ಸದ್ದು ಮಾಡುತ್ತಿದ್ದು, ಕೇವಲ 3 ದಿನಗಳ ಅಂತರದಲ್ಲಿ ಬರೊಬ್ಬರಿ 200 ನಾಯಿಗಳು ಸೋಂಕಿನಿಂದಾಗಿ ಸಾವನ್ನಪ್ಪಿವೆ ಎನ್ನಲಾಗಿದೆ.

published on : 21st February 2021

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್!

ಇತ್ತೀಚೆಗೆ ಆ್ಯಂಜಿಯೋ ಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಗುರಿಯಾಗಿದ್ದ ಬಿಸಿಸಿಐ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

published on : 31st January 2021

ದೇಶಕ್ಕೆ ನಾಲ್ಕು ರಾಷ್ಟ್ರ ರಾಜಧಾನಿ ಮಾಡಬೇಕು, ಕೋಲ್ಕತಾ ಅವುಗಳಲ್ಲಿ ಒಂದಾಗಿರಬೇಕು: ಮಮತಾ ಆಗ್ರಹ

ಕೋಲ್ಕತಾ ಸೇರಿದಂತೆ ದೇಶದಲ್ಲಿ ನಾಲ್ಕು ಪ್ರತ್ಯೇಕ ರಾಷ್ಟ್ರ ರಾಜಧಾನಿಗಳನ್ನು ನಿರ್ಮಿಸಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ಒತ್ತಾಯಿಸಿದ್ದಾರೆ.

published on : 23rd January 2021

ಲಕ್ಷ್ಮಿ ರತನ್ ಶುಕ್ಲಾ ಶಾಸಕರಾಗಿ ಮುಂದುವರೆಯಲಿದ್ದಾರೆ: ಸಿಎಂ ಮಮತಾ ಬ್ಯಾನರ್ಜಿ

ದಿಢೀರನೆ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಲಕ್ಷ್ಮಿ ರತನ್ ಶುಕ್ಲಾ ಅವರು ಸಚಿವರಾಗಿ ಅಲ್ಲ ಶಾಸಕರಾಗಿ ಮುಂದುವರೆಯಲಿದ್ದಾರೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

published on : 5th January 2021

ಪಶ್ಚಿಮ ಬಂಗಾಳ: ದೀದಿಗೆ ಮತ್ತೊಂದು ಆಘಾತ; ಸಚಿವ ಲಕ್ಷ್ಮಿ ರತನ್ ಶುಕ್ಲಾ ರಾಜಿನಾಮೆ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಆಘಾತ ಎದುರಾಗಿದ್ದು, ಯುವ ಸೇವೆಗಳು ಮತ್ತು ಕ್ರೀಡಾ ಇಲಾಖೆ ರಾಜ್ಯ ಸಚಿವರಾಗಿದ್ದ ಲಕ್ಷ್ಮಿ ರತನ್ ಶುಕ್ಲಾ  ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

published on : 5th January 2021

ನಾಳೆ ಆಸ್ಪತ್ರೆಯಿಂದ ಸೌರವ್ ಗಂಗೂಲಿ ಡಿಸ್ಚಾರ್ಜ್; ಮನೆಯಲ್ಲೇ ನಿತ್ಯ ತಜ್ಞರ ಮೇಲ್ವಿಚಾರಣೆ

ಹೃದಯಾಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿರುವ ಬಿಸಿಸಿಐ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರನ್ನು ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ವುಡ್ ಲ್ಯಾಂಡ್ಸ್ ಆಸ್ಪತ್ರೆಯ ವೈದ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

published on : 5th January 2021

ಚಿತ್ರೀಕರಣಕ್ಕಾಗಿ ಭಾರತಕ್ಕೆ ಬಂದಿದ್ದ ಬ್ರಿಟೀಷ್ ನಟಿಗೆ ಕೋವಿಡ್ ಸೋಂಕು ದೃಢ!

ಸಿನಿಮಾವೊಂದರ ಚಿತ್ರೀಕರಣಕ್ಕಾಗಿ ಬ್ರಿಟನ್ ನಿಂದ ಭಾರತಕ್ಕೆ ಆಗಮಿಸಿದ್ದ ಬ್ರಿಟೀಷ್ ನಟಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ.

published on : 5th January 2021
1 2 >