

ಕೋಲ್ಕತಾ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 30 ರನ್ ಗಳ ಹೀನಾಯ ಸೋಲು ಕಂಡಿದ್ದು, ಭಾರತದ ನೆಲದಲ್ಲಿ ದಕ್ಷಿಣ ಆಫ್ರಿಕಾ ಅತೀ ದೊಡ್ಡ ಗೆಲುವು ಸಾಧಿಸಿದೆ.
ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು 159 ರನ್ಗಳಿಗೆ ಆಲೌಟಾದರೆ, ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ 189 ರನ್ ಕಲೆಹಾಕಿತು.
ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಸೌತ್ ಆಫ್ರಿಕಾ 153 ರನ್ಗಳಿಗೆ ಆಲೌಟ್ ಆಗಿದೆ. ಮೊದಲ ಇನಿಂಗ್ಸ್ನಲ್ಲಿನ 30 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ನಲ್ಲಿ 124 ರನ್ಗಳ ಗುರಿ ಪಡೆದ ಟೀಮ್ ಇಂಡಿಯಾ ಕೇವಲ 93 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡ 30 ರನ್ಗಳಿಂದ ಸೋಲನುಭವಿಸಿದೆ.
2ನೇ ಅತೀ ಚಿಕ್ಕ ಗುರಿ ತಲುಪುವಲ್ಲಿ ಭಾರತ ವಿಫಲ
ಇನ್ನು ಭಾರತದ ಕ್ರಿಕೆಟ್ ಇತಿಹಾಸದಲ್ಲೇ ಭಾರತ 2ನೇ ಬಾರಿಗೆ 130 ಅಥವಾ ಅದಕ್ಕಿಂತ ಕಡಿಮೆ ಮೊತ್ತವನ್ನು ಚೇಸ್ ಮಾಡುವಲ್ಲಿ ವಿಫಲವಾಗಿದೆ. ಈ ಹಿಂದೆ 1997ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 120 ರನ್ ಗಳನ್ನು ಚೇಸ್ ಮಾಡುವಲ್ಲಿ ವಿಫಲವಾಗಿತ್ತು. ಬಳಿಕ 2024ರಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ 147 ರನ್ ಗಳನ್ನು ಚೇಸ್ ಮಾಡುವಲ್ಲಿ ವಿಫಲವಾಗಿತ್ತು.
Lowest targets India failed to chase down
120 vs WI Bridgetown 1997
124 vs SA Eden Gardens 2025
147 vs NZ Wankhede 2024
176 vs SL Galle 2015
193 vs Eng Lord’s 2025
194 vs Eng Edgbaston 201
ದಕ್ಷಿಣ ಆಫ್ರಿಕಾ ಅತ್ಯಂತ ಕಡಿಮೆ ಗುರಿಯನ್ನು2ನೇ ಬಾರಿಗೆ ಯಶಸ್ವಿ ರಕ್ಷಣೆ
ಇನ್ನು ಕ್ರಿಕೆಟ್ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾ 2ನೇ ಬಾರಿಗೆ ಅತ್ಯಂತ ಕಡಿಮೆ ಗುರಿಯನ್ನು ಯಶಸ್ವಿಯಾಗಿ ರಕ್ಷಣೆ ಮಾಡಿಕೊಂತಾಗಿದೆ. ಈ ಹಿಂದೆ 1994ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 117 ರನ್ ಗಳನ್ನು ಯಶಸ್ವಿಯಾಗಿ ಡಿಫೆಂಡ್ ಮಾಡಿಕೊಂಡು ಪಂದ್ಯ ಗೆದ್ದಿತ್ತು. ಈ ಪಂದ್ಯದ ಬಳಿಕ ಇಂದು ಭಾರತದ ವಿರುದ್ಧ 124 ರನ್ ಗಳನ್ನು ಯಶಸ್ವಿಯಾಗಿ ಡಿಫೆಂಡ್ ಮಾಡಿಕೊಂಡಿದೆ.
Lowest target successfully defended by South Africa
117 vs Aus Sydney 1994
124 vs Ind Eden Gardens 2025
146 vs Pak Faisalabad 1997
177 vs SL Kandy 2000
ಭಾರತದಲ್ಲಿ ಯಶಸ್ವಿಯಾಗಿ ಡಿಫೆಂಡ್ ಮಾಡಿದ 2ನೇ ಕನಿಷ್ಠ ಮೊತ್ತ
ಅಂತೆಯೇ ಭಾರತ ನೆಲದಲ್ಲಿ ಯಶಸ್ವಿಯಾಗಿ ಡಿಫೆಂಡ್ ಮಾಡಿದ 2ನೇ ಕನಿಷ್ಠ ಮೊತ್ತಕೂಡ ಇದಾಗಿದೆ. ಈ ಹಿಂದೆ 2004ರಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 107 ರನ್ ಗಳನ್ನು ಭಾರತ ಯಶಸ್ವಿಯಾಗಿ ಡಿಫೆಂಡ್ ಮಾಡಿಕೊಂಡು ಗೆದ್ದಿತ್ತು.
Lowest target successfully defended in Tests in India
107 Ind vs Aus Wankhede 2004
124 SA vs Ind Eden Gardens 2025
147 NZ vs Ind Wankhede 2024
170 Ind vs SA Ahmedabad 1996
Advertisement