1st test: ಭಾರತದ ಸೋಲಿಗೆ ಆ 'ಇಬ್ಬರೇ ಕಾರಣ': ಉಪ ನಾಯಕ ರಿಷಬ್ ಪಂತ್ ಹೇಳಿಕೆ

ಮೊದಲ ಇನಿಂಗ್ಸ್​ನಲ್ಲಿನ 30 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ನಲ್ಲಿ 124 ರನ್​ಗಳ ಗುರಿ ಪಡೆದ ಟೀಮ್ ಇಂಡಿಯಾ ಕೇವಲ 93 ರನ್​ಗಳಿಸಿ ಆಲೌಟ್ ಆಗಿದೆ.
Rishabh Pant owns up after Kolkata debacle
ರಿಷಬ್ ಪಂತ್
Updated on

ಕೋಲ್ಕತಾ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿನ ಭಾರತದ ಸೋಲಿಗೆ ಆ ಇಬ್ಬರು ಆಟಗಾರರೇ ಕಾರಣ ಎಂದು ಭಾರತ ಕ್ರಿಕೆಟ್ ತಂಡದ ಉಪ ನಾಯಕ ರಿಷಬ್ ಪಂತ್ ಹೇಳಿದ್ದಾರೆ.

ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು 159 ರನ್​ಗಳಿಗೆ ಆಲೌಟಾದರೆ, ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್​ನಲ್ಲಿ 189 ರನ್​ ಕಲೆಹಾಕಿತು.

ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ಸೌತ್ ಆಫ್ರಿಕಾ 153 ರನ್​ಗಳಿಗೆ ಆಲೌಟ್ ಆಗಿದೆ. ಮೊದಲ ಇನಿಂಗ್ಸ್​ನಲ್ಲಿನ 30 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ನಲ್ಲಿ 124 ರನ್​ಗಳ ಗುರಿ ಪಡೆದ ಟೀಮ್ ಇಂಡಿಯಾ ಕೇವಲ 93 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡ 30 ರನ್​ಗಳಿಂದ ಸೋಲನುಭವಿಸಿದೆ.

Rishabh Pant owns up after Kolkata debacle
1st Test: 124 ರನ್​ಗಳ ಗುರಿಯನ್ನೂ ಮುಟ್ಟಲಾಗದೇ ಹೀನಾಯ ಸೋಲುಕಂಡ ಭಾರತ!

ಪಂದ್ಯದ ಸೋಲಿನ ಬಳಿಕ ಮಾತನಾಡಿದ ತಂಡದ ಉಪನಾಯಕ ರಿಷಬ್ ಪಂತ್ , 'ದಕ್ಷಿಣ ಆಫ್ರಿಕಾ ನೀಡಿದ ಸುಲಭ ಗುರಿಯನ್ನು ನಾವು ಚೇಸ್ ಮಾಡಬೇಕಿತ್ತು. ಆದರೆ ನಾವು ಒತ್ತಡಕ್ಕೊಳಗಾದೆವು. ಇದರ ಸಂಪೂರ್ಣ ಲಾಭ ಪಡೆದ ಆಫ್ರಿಕಾ ಬೌಲರ್​​ಗಳಿಗೆ ಪಿಚ್ ಕೂಡ ಸಹಕಾರಿಯಾಯಿತು.

ಈ ಪಿಚ್​​​ನಲ್ಲಿ 120 ರನ್​ಗಳಿಸುವುದು ಕಷ್ಟಕರವಾಗಬಹುದು ಎಂದು ಗೊತ್ತಿತ್ತು. ಇದಾಗ್ಯೂ ನಾವು ಒತ್ತಡವನ್ನು ನಿಭಾಯಿಸಲು ವಿಫಲವಾದೆವು. ಈ ಸೋಲಿನ ಹೊರತಾಗಿಯೂ ಮುಂದಿನ ಪಂದ್ಯದಲ್ಲಿ ನಾವು ಕಂಬ್ಯಾಕ್ ಮಾಡುತ್ತೇವೆ' ಎಂದರು.

ಆ ಇಬ್ಬರೇ ಸೋಲಿಗೆ ಕಾರಣ

ಇದೇ ವೇಳೆ ಭಾರತ ತಂಡದ ಸೋಲಿಗೆ ಆ ಇಬ್ಬರೇ ಕಾರಣ ಎಂದು ರಿಷಬ್ ಪಂತ್ ಹೇಳಿದ್ದು, 'ಈ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ ಗೆಲ್ಲಲು ಮುಖ್ಯ ಕಾರಣ ಟೆಂಬಾ ಬವುಮಾ ಹಾಗೂ ಕಾರ್ಬಿಕ್ ಬಾಷ್. ಏಕೆಂದರೆ ಈ ಇಬ್ಬರು 8ನೇ ವಿಕೆಟ್​ಗೆ 44 ರನ್​ಗಳ ಜೊತೆಯಾಟವಾಡಿದ್ದರು. ಈ ಪಾಲುದಾರಿಕೆಯ ಪಂದ್ಯದ ಫಲಿತಾಂಶವನ್ನೇ ಬದಲಿಸುವಂತೆ ಮಾಡಿತು' ಎಂದು ಹೇಳಿದರು.

ಅಂತೆಯೇ ಈ ಸೋಲು ನೋವುಂಟು ಮಾಡಿದೆ. ಇದಾಗ್ಯೂ ಗುವಾಹಟಿಯಲ್ಲಿ ನಡೆಯಲಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೂಲಕ ನಾವು ಕಂಬ್ಯಾಕ್ ಮಾಡುತ್ತೇವೆ ಎಂದು ರಿಷಬ್ ಪಂತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com