ಪ್ರದ್ಯುಮನ್ ಹತ್ಯೆ ಪ್ರಕರಣ: ಪರೀಕ್ಷೆ ಮುಂದೂಡಲು ಹತ್ಯೆ ಮಾಡಿದ್ದಾಗಿ ಪ್ರಥಮ ಪಿಯು ವಿದ್ಯಾರ್ಥಿ ತಪ್ಪೊಪ್ಪಿಗೆ- ಸಿಬಿಐ

ಗುರುಗ್ರಾಮದ ರ್ಯಾನ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ 2ನೇ ತರಗತಿಯ ವಿದ್ಯಾರ್ಥಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನ.08 ರಂದು ಶಾಲೆಯ ಪ್ರಥಮ ಪಿಯು ವಿದ್ಯಾರ್ಥಿಯನ್ನು ಕೊಲೆ ಆರೋಪದಡಿ
ರ್ಯಾನ್ ಇಂಟರ್ ನ್ಯಾಷನಲ್ ಶಾಲೆ
ರ್ಯಾನ್ ಇಂಟರ್ ನ್ಯಾಷನಲ್ ಶಾಲೆ
ನವದೆಹಲಿ: ಗುರುಗ್ರಾಮದ ರ್ಯಾನ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ 2ನೇ ತರಗತಿಯ ವಿದ್ಯಾರ್ಥಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನ.08 ರಂದು ಶಾಲೆಯ  ಪ್ರಥಮ ಪಿಯು ವಿದ್ಯಾರ್ಥಿಯನ್ನು ಕೊಲೆ ಆರೋಪದಡಿ ಬಂಧಿಸಿದ್ದು, ಬಾಲ ನ್ಯಾಯಮಂಡಳಿ ಎದುರು ಹಾಜರುಪಡಿಸಲಿದೆ. 
ಪರೀಕ್ಷೆ ಹಾಗೂ ಪೋಷಕರು-ಶಿಕ್ಷಕರ ಸಭೆಯನ್ನು ಮುಂದೂಡಲು ಸಹಕಾರಿಯಾಗುತ್ತದೆ ಎಂಬ ದುರಾಲೋಚನೆಯಿಂದ ಪ್ರದ್ಯುಮನ್ ಎಂಬ ವಿದ್ಯಾರ್ಥಿಯನ್ನು ಕೊಲೆ ಮಾಡಿರುವುದಾಗಿ ಪ್ರಥಮ ಪಿಯು ವಿದ್ಯಾರ್ಥಿ ಒಪ್ಪಿಕೊಂಡಿದ್ದಾನೆ ಎಂದು ಸಿಬಿಐ ಮಾಹಿತಿ ನೀಡಿದೆ.
ಕೊಲೆ ಆರೋಪದಡಿ ಮಗನ ಬಂಧನವನ್ನು ತಂದೆ ಖಚಿತಪಡಿಸಿದ್ದಾರೆ, ಆದರೆ ಬಂಧಿತ ಆರೋಪಿ ಬಾಲಾಪರಾಧಿಯಾಗಿರುವುದರಿಂದ ಸಿಬಿಐ ಈ ವರೆಗೂ ಅಧಿಕೃತ ಹೇಳಿಕೆ ನೀಡಿಲ್ಲ.
ವಿದ್ಯಾರ್ಥಿಯ ಬಂಧನವಾಗಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆತನ ತಂದೆ, ನನ್ನ ಮಗ ಅಪರಾಧ ಮಾಡಿಲ್ಲ, ಶೌಚಾಲಯದಲ್ಲಿ ವಿದ್ಯಾರ್ಥಿಯ ಮೃತದೇಹ ಇರುವುದನ್ನು ಶಿಕ್ಷಕರಿಗೆ ತಿಳಿಸಿದ್ದ ಎಂದು ಹೇಳಿದ್ದಾರೆ. ಸೆಪ್ಟೆಂಬರ್ 8ರಂದು 7 ವರ್ಷ ವಿದ್ಯಾರ್ಥಿಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು, ವಿದ್ಯಾರ್ಥಿಯ ಶವ ಶಾಲಾ ಶೌಚಾಲಯದಲ್ಲಿ ಪತ್ತೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com