ಆರೋಪಿ ವಿದ್ಯಾರ್ಥಿಯನ್ನು ಬಂಧಿಸಿದ್ದ ಸಿಬಿಐ, ಆತನನ್ನು 6 ದಿನಗಳ ವಶಕ್ಕೆ ನೀಡುವಂತೆ ಕೋರಿತ್ತು, ಅಷ್ಟೇ ಅಲ್ಲದೇ ಹತ್ಯೆ ಘೋರ ಅಪರಾಧವಾಗಿದ್ದರಿಂದ ಆರೋಪಿಯನ್ನು ಬಾಲಾಪರಾಧಿ ಎಂದು ಪರಿಗಣಿಸದೇ ವಯಸ್ಕ ಅಪರಾಧಿ ಎಂದು ಪರಿಗಣಿಸಬೇಕೆಂದು ಸಿಬಿಐ ಮನವಿ ಮಾಡಿತ್ತು. ಸಿಬಿಐ ನ ಮನವಿಯನ್ನು ಆಲಿಸಿರುವ ನ್ಯಾಯಮಂಡಳಿ ಆರೋಪಿಯನ್ನು 3 ದಿನಗಳ ವಶಕ್ಕೆ ನೀಡಿದ್ದು, ಬೆಳಿಗ್ಗೆ 10-6 ರ ವರೆಗೆ ಮಾತ್ರ ಆರೋಪಿಯ ವಿಚಾರಾಣೆ ನಡೆಸಬೇಕು ಹಾಗೂ ಆ ಬಳಿಕ ಆತನನ್ನು ಬಾಲಾಪರಾಧಿಗಳಿರುವ ಸ್ಥಳಕ್ಕೆ ಕಳಿಸಬೇಕೆಂದು ಹೇಳಿದೆ.