ದೆಹಲಿ:ಹೆಚ್ಚುವರಿ 186 ಬಾರಿ ಸಂಚರಿಸಲಿರುವ ಮೆಟ್ರೊ, ಮಾಲಿನ್ಯ ನಿಯಂತ್ರಣಕ್ಕೆ ಕ್ರಮ

ನಗರದಲ್ಲಿ ಮಿತಿಮೀರಿ ಏರಿಕೆಯಾಗಿರುವ ವಾಯುಮಾಲಿನ್ಯದಿಂದಾಗಿ ಖಾಸಗಿ ವಾಹನಗಳನ್ನು ಬಿಟ್ಟು ಸಾರ್ವಜನಿಕರು ಮೆಟ್ರೊ ರೈಲನ್ನು ಬಳಸುವಂತೆ ಉತ್ತೇಜನ ನೀಡಲು ....
ದೆಹಲಿ ಮೆಟ್ರೊ(ಪಿಟಿಐ ಚಿತ್ರ)
ದೆಹಲಿ ಮೆಟ್ರೊ(ಪಿಟಿಐ ಚಿತ್ರ)
ನವದೆಹಲಿ: ನಗರದಲ್ಲಿ ಮಿತಿಮೀರಿ ಏರಿಕೆಯಾಗಿರುವ ವಾಯುಮಾಲಿನ್ಯದಿಂದಾಗಿ ಖಾಸಗಿ ವಾಹನಗಳನ್ನು ಬಿಟ್ಟು ಸಾರ್ವಜನಿಕರು ಮೆಟ್ರೊ ರೈಲನ್ನು ಬಳಸುವಂತೆ ಉತ್ತೇಜನ ನೀಡಲು ದೆಹಲಿ ಮೆಟ್ರೊ ಇಂದಿನಿಂದ ಹೆಚ್ಚುವರಿ 180 ಬಾರಿ ಮೆಟ್ರೊ ಸಂಚಾರವನ್ನು ನಡೆಸಲಿದ್ದು ಖಾಸಗಿ ವಾಹನಗಳ ಪಾರ್ಕಿಂಗ್ ಶುಲ್ಕವನ್ನು ನಾಲ್ಕು ಪಟ್ಟು ಹೆಚ್ಚಿಸುತ್ತಿದೆ. ಇದರಿಂದ ಖಾಸಗಿ ವಾಹನಗಳನ್ನು ನಾಗರಿಕರು ತಗ್ಗಿಸಲು ತೆಗೆದುಕೊಂಡಿರುವ ಕ್ರಮವಾಗಿದೆ.
ಇಂದಿನಿಂದ ದೆಹಲಿ ಮೆಟ್ರೊ ಕಾರ್ಪೊರೇಶನ್ 3,317 ಸಲ ರೈಲುಗಳನ್ನು ಓಡಿಸಲಿದೆ. ಇದುವರೆಗೆ 3,131 ಬಾರಿ ಮೆಟ್ರೊ ರೈಲು ಸಂಚರಿಸುತ್ತಿತ್ತು. ಹೆಚ್ಚುವರಿ 186 ಟ್ರಿಪ್ ನಡೆಸಲಿದೆ. ಈ ಮೂಲಕ ವಾಯುಮಾಲಿನ್ಯ ದಟ್ಟಣೆಯನ್ನು ಕಡಿಮೆ ಮಾಡಲು ಮುಂದಾಗಿದೆ.
ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್, ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರದ ಆದೇಶವನ್ನು ಅನುಮೋದಿಸಿದ ನಂತರ ಮೆಟ್ರೊ ಹೆಚ್ಚುವರಿ 90 ಬಾರಿ ಸಂಚರಿಸಿದೆ. ಆದರೆ ಪೀಕ್ ಅವರ್ ಮತ್ತು ಆಫ್ ಪೀಕ್ ಅವರ್ ನಲ್ಲಿ ಸ್ಮಾರ್ಟ್ ಕಾರ್ಡು ಬಳಕೆದಾರರಿಗೆ ವಿವಿಧ ದರ ವಿಧಿಸಿರುವುದರಿಂದ ಪ್ರಯಾಣ ದರದಲ್ಲಿ ಸದ್ಯಕ್ಕೆ ಬದಲಾವಣೆ ಮಾಡದಿರಲು ನಿರ್ಧರಿಸಿದೆ.

ರೆಡ್ ಲೈನ್ ಮತ್ತು ಏರ್ ಪೋರ್ಟ್ ಎಕ್ಸ್ ಪ್ರೆಸ್ ಲೈನ್ ನಲ್ಲಿ ಸಂಚಾರದ ಸಂಖ್ಯೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com