ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಬಾಲಕನು, 'ಶಾಲೆಯಲ್ಲಿ ಪುಂಡ ಹುಡುಗನಾಗಿದ್ದು, ಓದಿನಲ್ಲಿ ಹಿಂದಿದ್ದ. ಶಾಲೆಗೆ ಬರುವಾಗ ಕೆಲವೊಮ್ಮೆ ಚೂರಿಯನ್ನು ತರುತ್ತಿದ್ದ. ಚಿಕ್ಕ ಮಕ್ಕಳನ್ನು ಹೊಡೆದು ಹಿಂಸಿಸಿ ಅವರಿಗೆ ಭಯ ಹುಟ್ಟಿಸುತ್ತಿದ್ದ. ಎಲ್ಲಕ್ಕಿಂತ ಮೇಲಾಗಿ ಆತನಿಗೆ ಇಂಟರ್‌ನೆಟ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ನೋಡುವ ಅಭ್ಯಾಸವಿತ್ತು ಮತ್ತು ಪ್ರದ್ಯುಮ್ನನನ್ನು ಕೊಲೆ ಮಾಡುವ ಹಿಂದಿನ ದಿನವೂ ಪೋರ್ನ್ ಚಿತ್ರವನ್ನು ವೀಕ್ಷಿಸಿದ್ದ, ಹೆತ್ತವರು ಮತ್ತು ಶಿಕ್ಷಕರ ಸಭೆ ಮುಂದಕ್ಕೆ ಹೋಗುವಂತೆ ಮತ್ತು ಅದರೊಂದಿಗೆ ಪರೀಕ್ಷೆಗಳೂ ಮುಂದಕ್ಕೆ ಹೋಗುವಂತೆ ನಾನು ಏನಾದರೂ ಮಾಡುವೆ ಎಂದು ಸಹ ವಿದ್ಯಾಥಿಗಳಲ್ಲಿ ಕೊಚ್ಚಿಕೊಂಡಿದ್ದ ಎಂಬ ಮಾಹಿತಿಗಳನ್ನು ಸಿಬಿಐ ಕಲೆ ಹಾಕಿತ್ತು.